ರಾಹುಲ್​ ಅಭಿಮಾನಿಯಾಗಿ ನಾನಿಲ್ಲಿ ಬಂದಿದ್ದೇನೆ: ತೀರ್ಥಹಳ್ಳಿ ಕಾಂಗ್ರೆಸ್ ಸಮಾವೇಶದಲ್ಲಿ ನಟ ಶಿವರಾಜ್ ಕುಮಾರ್

ಭಾರತ್ ಜೋಡೊ ಯಾತ್ರೆಯನ್ನು ಶ್ಲಾಘಿಸಿದ ನಟ

Update: 2023-05-02 11:19 GMT

ಶಿವಮೊಗ್ಗ, ಮೇ 2:  ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬಾಳೇಬೈಲು ಸಮೀಪದ ಮೈದಾನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ನಟ ಶಿವರಾಜ್ ಕುಮಾರ್ ವೇದಿಕೆ ಹಂಚಿಕೊಂಡರು. 

ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಶಿವರಾಜ್ ಕುಮಾರ್ "ನಾನು ಕೂಡ ನಿಮ್ಮ ಹಾಗೆ ರಾಹುಲ್ ಗಾಂಧಿಯವರ ಅಭಿಮಾನಿಯಾಗಿ ಇಲ್ಲಿಗೆ ಬಂದಿದ್ದೇನೆ. ಅವರು ಇತ್ತೀಚೆಗೆ ಭಾರತ್ ಜೋಡೊ ಯಾತ್ರೆ ಮೂಲಕ ದೇಶಾದ್ಯಂತ ನಡೆದರು. ಭಾರತ್ ಜೋಡೊ ಯಾತ್ರೆಯಿಂದ ನನಗೆ ಉತ್ತೇಜನ ಸಿಕ್ಕಿದೆ. ಏಕೆಂದರೆ ಫಿಟ್ನೆಸ್ ಅಂದರೆ ನನಗೆ ತುಂಬಾ ಇಷ್ಟ. ಫಿಟ್ನೆಸ್ ಜೊತೆಗೆ ಒಂದು ಒಳ್ಳೆಯ ಉದ್ದೇಶದೊಂದಿಗೆ ಅವರು ಆ ಯಾತ್ರೆಯನ್ನು ಮಾಡಿದ್ದಾರೆ'' ಎಂದು ಶಿವರಾಜ್ ಕುಮಾರ್ ತಿಳಿಸಿದರು. 

ಸಮಾವೇಶದಲ್ಲಿ  ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, ತೀರ್ಥಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್, ಗೀತಾ ಶಿವರಾಜ್ ಕುಮಾರ್, ಸೊರಬ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಉಪಸ್ಥಿತರಿದ್ದರು. 

Similar News