ಬೆಲ್ಗ್ರೇಡ್‌ನ ಶಾಲೆಯಲ್ಲಿ ಶೂಟೌಟ್: 8 ಮಕ್ಕಳು ಸಹಿತ 9 ಮಂದಿ ಮೃತ್ಯು ಹದಿಹರೆಯದ ಬಾಲಕ ಪೊಲೀಸ್ ವಶಕ್ಕೆ

Update: 2023-05-03 17:30 GMT

ಬೆಲ್ಗ್ರೇಡ್,ಮೇ 3: ಸರ್ಬಿಯದ ರಾಜಧಾನಿ ಬೆಲ್ಗ್ರೇಡ್‌ನ ಪ್ರಾಥಮಿಕ ಶಾಲೆಯೊಂದರಲ್ಲಿ ಬುಧವಾರ ಹದಿಹರೆಯದ ಬಾಲಕನೊಬ್ಬ ನಡೆಸಿದ ಭೀಕರ ಶೂಟೌಟ್‌ನಲ್ಲಿಕನಿಷ್ಠ ಎಂಟು ಮಕ್ಕಳು ಹಾಗೂ ಓರ್ವ ಭದ್ರತಾ ಕಾವಲುಗಾರ ಸಾವವನ್ನಪ್ಪಿದ್ದಾರೆ. ದಾಳಿ ನಡೆಸಿದ್ದ ಹದಿಹರೆಯದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶಾಲಾ ಶೂಟೌಟ್ ಹಾಗೂ ಬಂದೂಕಿನಹಿಂಸಾಚಾರದ ಪ್ರಕರಣಗಳು ತೀರಾ ವಿರಳವಾಗಿರುವ ಸರ್ಬಿಯವನ್ನು, ಈ ಘಟನೆಯು ಬೆಚ್ಚಿಬೀಳಿಸಿದೆಯೆಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

‘‘ಬೆಲ್ಗ್ರೇಡ್‌ನ ವಾಣಿಜ್ಯಪ್ರದೇಶವಾದ ವ್ರಕಾರ್ ಜಿಲ್ಲೆಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 8:40ರ ವೇಳೆಗೆ ಶೂಟೌಟ್‌ನಡೆದಿದ್ದು, ಘಟನೆಯಲ್ಲಿ ಎಂಟು ಮಂದಿ ಮಕ್ಕಳು ಹಾಗೂ ಓರ್ವ ಭದ್ರತಾ ಕಾವಲುಗಾರ ಹತ್ಯೆಯಾಗಿದ್ದಾರೆ. ಇತರ ಆರು ಮಂದಿ ಮಕ್ಕಳು ಹಾಗೂ ಓರ್ವ ಶಾಲಾ ಅಧ್ಯಾಪಕ ಗಾಯಗೊಂಡಿದ್ದಾರೆ’’ ಎಂದು ಸರ್ಬಿಯ ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ.

‘‘ ಪೊಲೀಸ್ ಪಡೆಗಳು ಸ್ಥಳಕ್ಕೆ ಧಾವಿಸಿದ್ದು ತನಿಖೆ ನಡೆಸುತ್ತಿವೆೆ’’ ಎಂದು ಬೆಲ್ಗ್ರೇಡ್‌ನ ವ್ರಕಾರ್ ಜಿಲ್ಲಾ ಅಧ್ಯಕ್ಷ ಮಿಲಾನ್ ನೆಡೆಲ್‌ಜ್‌ಕೊವಿಕ್ ತಿಳಿಸಿದ್ದಾರೆ.

ಹದಿಹರೆಯದ ಬಾಲಕ ಗುಂಡು ಹಾರಾಟ ನಡೆಸುವುದನ್ನು ತಡೆಯಲು ಭದ್ರತಾ ಕಾವಲುಗಾರನು ಪ್ರಯತ್ನಿಸಿದ್ದನು. ಆದರೆ ಆತನೇ ಮೊದಲ ಬಲಿಯಾದ’’ ಎಂದವರು ಹೇಳಿದ್ದಾರೆ. ಒಂದು ವೇಳೆ ಗುಂಡುಹಾರಾಟ ನಿರತ ಬಾಲಕನನ್ನು ಭದ್ರತಾ ಕಾವಲುಗಾರನು ಅಡ್ಡಗಟ್ಟಿ ನಿಲ್ಲುದೆ ಇರುತ್ತಿದ್ದರೆ ದುರಂತವು ಇನ್ನಷ್ಟು ಘೋರವಾಗಿರುತ್ತಿತ್ತು ಎಂದು ನೆಡೆಲ್‌ಜೊಕೊವಿಕ್ ತಿಳಿಸಿದರು.

ಗುಂಡುಹಾರಾಟದ ಸಂದರ್ಭದಲ್ಲಿ ಶಿಕ್ಷಕರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಶಾಲಾಕೊಠಡಿಯನ್ನು ಲಾಕ್ ಮಾಡಿ ವಿದ್ಯಾರ್ಥಿಗಳನ್ನು ಬಚ್ಚಿಟ್ಟುಕೊಂರು ಎಂದು ವಿದ್ಯಾರ್ಥಿನಿಯೊಬ್ಬರ ತಂದೆ ಆಸ್ಟ್ರಿಡ್ ಮೆರ್ಲಿನಿ ತಿಳಿಸಿದ್ದಾರೆ. ಶೂಟೌಟ್ ನಡೆಸಿದ್ದಾನೆನ್ನಲಾದ ಹದಿಹರೆಯದ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Similar News