ಜಮೀನು ವಿವಾದ: ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ; ಮೂವರು ಮಹಿಳೆಯರ ಸಹಿತ ಆರು ಮಂದಿ ಮೃತ್ಯು

Update: 2023-05-05 10:56 GMT

ಭೋಪಾಲ್: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಜಮೀನು ವಿವಾದ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ಆರು ಸದಸ್ಯರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮತ್ತಿಬ್ಬರು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

 ಎರಡು ಗುಂಪುಗಳು ಪರಸ್ಪರ ಗುಂಡಿನ ದಾಳಿ ನಡೆಸಿವೆ.  ಗುಂಡಿನ ದಾಳಿಯಲ್ಲಿ ಇತರ ಇಬ್ಬರು ಪುರುಷರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಕ್ಷಣ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮೊರೆನಾದ ಲೆಪಾ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಾಹಿತಿಯ ಪ್ರಕಾರ, ದೀರ್ ಸಿಂಗ್ ಹಾಗೂ  ಗಜೇಂದ್ರ ಸಿಂಗ್ ಅವರ ಕುಟುಂಬಗಳು ಜಮೀನು ವಿವಾದಕ್ಕೆ ಸಂಬಂಧಿಸಿ  ಜಗಳವಾಡುತ್ತಿದ್ದವು

ಧೀರ್ ಸಿಂಗ್ ಕುಟುಂಬದ ಇಬ್ಬರನ್ನು 2013 ರಲ್ಲಿ ಹತ್ಯೆ ಮಾಡಲಾಗಿತ್ತು. ಗಜೇಂದ್ರ ಸಿಂಗ್ ಅವರ ಕುಟುಂಬವು ಕೊಲೆಯ ಆರೋಪ ಹೊತ್ತಿತ್ತು. ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿತ್ತು. ನಂತರ ಇಬ್ಬರ  ನಡುವೆ ಒಪ್ಪಂದವನ್ನು ರೂಪಿಸಲಾಯಿತು. ಒಪ್ಪಂದದ ನಂತರ ಗಜೇಂದ್ರ ಸಿಂಗ್ ಅವರ ಕುಟುಂಬವೂ ಅದೇ ಗ್ರಾಮದಲ್ಲಿ ನೆಲೆಸಿತು.

ಶುಕ್ರವಾರ ಬೆಳಗ್ಗೆ ಧೀರ್ ಸಿಂಗ್ ಹಾಗೂ  ಗಜೇಂದ್ರ ಸಿಂಗ್ ಗುಂಪುಗಳ ನಡುವೆ ಘರ್ಷಣೆ ನಡೆಯಿತು. ಆರಂಭದಲ್ಲಿ ಗಜೇಂದ್ರ ಸಿಂಗ್ ಬೆಂಬಲಿಗರನ್ನು ದೊಣ್ಣೆಗಳಿಂದ ಥಳಿಸಲಾಯಿತು. ಅಂತಿಮವಾಗಿ, ಶೈಮು ಮತ್ತು ಅಜಿತ್ (ಧೀರ್ ಸಿಂಗ್  ಕುಟುಂಬಕ್ಕೆ ಸೇರಿದವರು) ಇತರ ಗುಂಪಿನ ಮೇಲೆ ಗುಂಡು ಹಾರಿಸಿದ್ದರಿಂದ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿತು.

Similar News