12 ಸಾವಿರ ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ; ಪಾಕಿಸ್ತಾನಿ ಪ್ರಜೆಯ ಬಂಧನ

Update: 2023-05-14 03:53 GMT

ಹೊಸದಿಲ್ಲಿ: ಕೇರಳ ಕರಾವಳಿಯಲ್ಲಿ ಹಡಗೊಂದರಿಂದ ಸುಮಾರು 12 ಸಾವಿರ ಕೋಟಿ ರೂಪಾಯಿ ಮೌಲ್ಯದ 2500 ಕೆಜಿ ಮೆಟಾಫೆಟಮೈನ್ ಅನ್ನು ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ (ಎನ್ ಸಿಬಿ) ವಶಪಡಿಸಿಕೊಂಡಿದೆ.

ಮಾದಕ ವಸ್ತು ವಿರುದ್ಧದ ಸಮರದಲ್ಲಿ ದೇಶ ಭರ್ಜರಿ ಯಶಸ್ಸು ಸಾಧಿಸಿದ್ದು, ಇದು ದೇಶದ ಇತಿಹಾಸದಲ್ಲೇ ಅತಿದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತು ವಶಪಡಿಸಿಕೊಂಡ ಪ್ರಕರಣವಾಗಿದೆ ಎಂದು ಎನ್‌ಸಿಬಿ ಪ್ರಕಟಿಸಿದೆ.

ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಎನ್‌ಸಿಬಿ ಉಪ ಮಹಾನಿರ್ದೇಶಕ ಸಂಜಯ್ ಕುಮಾರ್ ಸಿಂಗ್, ಅಫ್ಘಾನಿಸ್ತಾನ ಮೂಲದ ಮಾದಕ ವಸ್ತು ಕಳ್ಳಸಾಗಾಣಿಕೆಯನ್ನು ತಡೆಯುವ ಉದ್ದೇಶದಿಂದ ಅಪರೇಷನ್ ಸಮುದ್ರಗುಪ್ತ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯಯಲ್ಲಿ ಭಾರಿ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಕಳೆದ ಒಂದುವರೆ ವರ್ಷಗಳ ಅವಧಿಯಲ್ಲಿ ದಕ್ಷಿಣ ಸಮುದ್ರ ಮಾರ್ಗದಲ್ಲಿ ಎನ್‌ಸಿಪಿ ಡ್ರಗ್ಸ್ ವಶಪಡಿಸಿಕೊಂಡ ಮೂರನೇ ಪ್ರಮುಖ ಪ್ರಕರಣವಾಗಿದೆ. ಈವರೆಗೆ ಈ ಕಾರ್ಯಾಚರಣೆಯಲ್ಲಿ ಒಟ್ಟು 3200 ಕೆ.ಜಿ. ಮೆಟಾಫೆಟಮೈನ್, 500 ಕೆಜಿ ಹೆರಾಯಿನ್ ಮತು 525 ಕೆಜಿ ಹಶೀಶ್ ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಸಿಬಿ ಹೇಳಿದೆ.

Similar News