‘ಸೂಕ್ಷ್ಮ’ ರಕ್ಷಣಾ ಮಾಹಿತಿಗಳನ್ನು ವಿದೇಶಗಳಿಗೆ ನೀಡಿದ ಆರೋಪ: ಪತ್ರಕರ್ತನ ವಿರುದ್ಧ ಸಿಬಿಐ ಮೊಕದ್ದಮೆ

Update: 2023-05-16 18:45 GMT

ಹೊಸದಿಲ್ಲಿ, ಮೇ 16: ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (DRDO) ಮತ್ತು ಸೇನೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಿ ವಿದೇಶಗಳ ಬೇಹುಗಾರಿಕಾ ಸಂಸ್ಥೆಗಳಿಗೆ ನೀಡಿದ ಆರೋಪದಲ್ಲಿ ಸಿಬಿಐ ಸ್ವತಂತ್ರ (ಫ್ರೀಲಾನ್ಸ್) ಪತ್ರಕರ್ತರೊಬ್ಬರ ವಿರುದ್ಧ ಮೊಕದ್ದಮೆ ದಾಖಲಿಸಿದೆ.

ವಿವೇಕ್ ರಘುವಂಶಿ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆ ಸೇರಿದಂತೆ ಹಲವು ಕಾನೂನುಗಳ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಘುವಂಶಿ ಡಿಆರ್‌ಡಿಒ ಮತ್ತು ಸೇನಾ ಯೋಜನೆಗಳ ‘‘ಸೂಕ್ಷ್ಮ’’ ಮತ್ತು ‘‘ಸಮಗ್ರ’’ ವಿವರಗಳನ್ನು ಸಂಗ್ರಹಿಸಿದ್ದಾರೆ ಮತ್ತು ವಿದೇಶಗಳ ಬೇಹುಗಾರಿಕಾ ಸಂಸ್ಥೆಗಳಿಗೆ ನೀಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಸಿಬಿಐಯು ಜೈಪುರ ಮತ್ತು ರಾಷ್ಟ್ರ ರಾಜಧಾನಿ ವಲಯದಲ್ಲಿರುವ 12 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಮತ್ತು ಸೂಕ್ಷ್ಮ ದಾಖಲೆಗಳನ್ನು ಪತ್ತೆಹಚ್ಚಿದೆ ಎಂದು ಮೂಲಗಳು ತಿಳಿಸಿವೆ.

Similar News