ಜಮ್ಮು: ಜಿಎಂಸಿ ಹಿಂಸಾಚಾರ ಪ್ರಕರಣ: ಹಲ್ಲೆಗೊಳಗಾದ ವಿದ್ಯಾರ್ಥಿಯ ಬಂಧನ!

Update: 2023-05-16 17:26 GMT

ಹೊಸದಿಲ್ಲಿ: ಜಮ್ಮುವಿನ ಪ್ರತಿಷ್ಠಿತ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ (ಜಿಎಂಸಿ) ನಡೆದ ಕೋಮುಘರ್ಷಣೆಯ ಸಂದರ್ಭದಲ್ಲಿ ಬರ್ಬರವಾಗಿ ಹಲ್ಲೆಗೊಳಗಾಗಿದ್ದ 23 ವರ್ಷ ವಯಸ್ಸಿನ ವಿದ್ಯಾರ್ಥಿಯನ್ನು ಇತರ 9 ಮಂದಿ ವಿದ್ಯಾರ್ಥಿಗಳ ಜೊತೆಗೆ ಬಂಧಿಸಲಾಗಿದೆ.

ಜಿಎಂಸಿಯ ಹುಡುಗರ ಹಾಸ್ಟೆಲ್ ನಲ್ಲಿಮೇ 14 ಹಾಗೂ ಮೇ 15ರ ಮಧ್ಯರಾತ್ರಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರಲ್ಲಿ ಒಬ್ಬಾತನ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದುಬಂದಿದೆ. ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ದೀಪಕ್ ಚಾಂದೆಲ್ ಎಂಬಾತ ಮೇ 14ರಂದು ವಿವಾದಾತ್ಮಕ ಬಾಲಿವುಡ್ ಚಿತ್ರ ‘ ದಿ ಕೇರಳ ಸ್ಟೋರಿ’ಯ ಲಿಂಕ್ ಒಂದನ್ನು ವಾಟ್ಸಾಪ್ ಗ್ರೂಪ್ ನಲ್ಲಿ ಪೋಸ್ಟ್ ಮಾಡಿದ್ದನು ಹಾಗೂ ಜಾಗೃತ ಪ್ರಜೆಗಳು ಖಂಡಿತವಾಗಿಯೂ ನೋಡಬೇಕಾದ ಚಿತ್ರವಿದು’’ ಎಂದು ಕಮೆಂಟ್ ಮಾಡಿದ್ದ ಬಳಿಕ ಜಿಎಂಸಿ ಕ್ಯಾಂಪಸ್ ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.

ದೀಪಕ್ ಚಾಂದೆಲ್ನ ಪೋಸ್ಟ್ಗೆ, ಮೊದಲ ವರ್ಷದ ಎಂಬಿಬಿಎಸ್ನ ಇನ್ನೋರ್ವ ವಿದ್ಯಾರ್ಥಿ ಅಖಿಬ್ ಇಶಾಕ್ ಎಂಬಾತ ಆಕ್ಷೇಪ ವ್ಯಕ್ತಪಡಿಸಿದ್ದ ಹಾಗೂ ನಕಾರಾತ್ಮಕ ವಿಷಯಗಳನ್ನು ಹರಡದಂತೆ ಆತನನ್ನು ಆಗ್ರಹಿಸಿದ್ದ. ‘‘ಒಂದು ವೇಳೆ ನಿಜಕ್ಕೂ ನೀನು ಈ ರೀತಿಯ ನಕಾರಾತ್ಮಕತೆಯನ್ನು ಹರಡಲು ಆಸಕ್ತಿ ಹೊಂದಿದ್ದಲ್ಲಿ ಅದಕ್ಕಾಗಿಯೇ ಬೇರೊಂದು ಗ್ರೂಪ್ ಅನ್ನು ಸೃಷ್ಟಿಸು’’ ಎಂದು ಅಖಿಬ್ ಉತ್ತರಿಸಿದ್ದುದು, ವಿದ್ಯಾರ್ಥಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು.

ಅಲ್ಲದೆ ದೀಪಕ್ ಹಾಗೂ ಅಖಿಬ್ ಕ್ಯಾಂಪಸ್ನಲ್ಲಿ ಉತ್ತಮ ಸ್ನೇಹಿತರಾಗಿದ್ದು. ಆದರೆ ಕೇರಳ ಸ್ಟೋರಿ ವಿವಾದವು ಅವರನ್ನು ಸಂಘರ್ಷದ ದಾರಿಗೆ ಎಳೆದೊಯ್ದಿದೆ ಎಂದು ಮೊದಲ ವರ್ಷದ ಕೆಲವು ಎಂಬಿಬಿಎಸ್ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ರವಿವಾರದಂದು ವಿದ್ಯಾರ್ಥಿಗಳು ಪಿಕಿನಿಕ್ಗೂ ಜೊತೆಯಾಗಿಯೇ ತೆರಳಿದ್ದ ವಿದ್ಯಾರ್ಥಿಗಳು ಸಂಜೆಯ ವೇಳೆ ವಾಪಾಸಾಗಿದ್ದು.

 ಆಗ ಕೆಲವು ಹಿರಿಯ ವಿದ್ಯಾರ್ಥಿಗಳು ಹಾಗೂ ಸ್ನೇಹಿತರೊಂದಿಗಿದ್ದ ದೀಪಕ್, ತನ್ನ ಪೋಸ್ಟ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಇನ್ನೋರ್ವ ಎಂಬಿಬಿಎಸ್ ವಿದ್ಯಾರ್ಥಿ ಅರಿಫ್ ಗುಲ್ನನ್ನು ತಡೆದು ನಿಲ್ಲಿಸಿದ್ದ ಹಾಗೂ ಆತನ ವಿರೋಧಕ್ಕೆ ಕಾರಣ ಕೇಳಿದ್ದ. ಆಗ ಎರಡು ಗುಂಪುಗಳ ನಡುವೆ ಘರ್ಷಣೆ ಸ್ಫೋಟಿಸಿತು ಎಂದು ಮೂಲಗಳು ತಿಳಿಸಿದ್ದರು.

Similar News