ಸೂಕ್ಷ್ಮ, ರಕ್ಷಣಾ ಮಾಹಿತಿ ವಿದೇಶಗಳಿಗೆ ನೀಡಿದ ಆರೋಪ: ಮಾಜಿ ನೌಕಾಪಡೆ ಕಮಾಂಡರ್‌ ಆಶಿಷ್‌ ಪಾಠಕ್ ಬಂಧನ

Update: 2023-05-17 13:31 GMT

ಹೊಸದಿಲ್ಲಿ: ಸೂಕ್ಷ್ಮ ರಕ್ಷಣಾ ಮಾಹಿತಿಗಳನ್ನು ಸಂಗ್ರಹಿಸಿ ಅವುಗಳನ್ನು ವಿದೇಶಗಳ ಬೇಹುಗಾರಿಕಾ ಸಂಸ್ಥೆಗಳಿಗೆ ನೀಡಿದ ಆರೋಪ ಎದುರಿಸುತ್ತಿರುವ ಮಾಜಿ ನೌಕಾಪಡೆ ಕಮಾಂಡರ್‌ ಆಶಿಷ್‌ ಪಾಠಕ್ ಹಾಗೂ ಫ್ರೀಲಾನ್ಸ್‌ ಪತ್ರಕರ್ತ ವಿವೇಕ್‌ ರಘುವಂಶಿ ಎಂಬವರನ್ನು ಸಿಬಿಐ ಬಂಧಿಸಿದೆ. ರಘುವಂಶಿ ವಿರುದ್ಧ ಎಫ್‌ಐಆರ್‌ ದಾಖಲಾದ ನಂತರ ಮಂಗಳವಾರ ಆತನ ನಿವಾಸದಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿತ್ತು.

ಅಮೆರಿಕಾದ ಮೂಲದ ಡಿಫೆನ್ಸ್‌ ಎಂಡ್‌ ಸ್ಟ್ರೆಟೆಜಿಕ್‌ ಅಫೇರ್ಸ್‌ ಕುರಿತ ವೆಬ್‌ಸೈಟ್‌ನ ಭಾರತದ ಪ್ರತಿನಿಧಿ ಎಂದು ರಘುವಂಶಿಯನ್ನು ಉಲ್ಲೇಖಿಸಲಾಗಿದೆ. ಆತನಿಗೆ ಸಂಬಂಧಿಸಿದ ಹಾಗೂ ಆತನಿಗೆ ಹತ್ತಿರದ ಜನರಿಗೆ ಸಂಬಂಧಿಸಿದ ಜೈಪುರ್‌ ಮತ್ತು ದಿಲ್ಲಿಯ 12 ಕಡೆರಗಳಲ್ಲಿ ಸಿಬಿಐ ಶೋಧ ನಡೆಸಿದೆ.

ರಘುವಂಶಿ ಮತ್ತು ಪಾಠಕ್‌ ಇಬ್ಬರನ್ನೂ ಅಧಿಕೃತ ಗೌಪ್ಯತಾ ಕಾಯಿದೆಯ ಸೆಕ್ಷನ್‌ 3 (ಬೇಹುಗಾರಿಕೆ) ಮತ್ತು ಐಪಿಸಿಯ ಸೆಕ್ಷನ್‌ 120-ಬಿ (ಕ್ರಿಮಿನಲ್‌ ಸಂಚು) ಆರೋಪದಡಿ ಬಂಧಿಸಲಾಗಿದೆ.

ಶೋಧದ ವೇಳೆ ಹಲವಾರು ಸೂಕ್ಷ್ಮ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿಯಿದೆ.

Similar News