ಚೆನ್ನೈನ ಪೂರ್ವಜರ ಮನೆ ಮಾರಾಟ ಮಾಡಿದ ಗೂಗಲ್ ಸಿಇಒ ಸುಂದರ್ ಪಿಚ್ಚೈ: ಕಣ್ಣೀರಾದ ಪಿಚ್ಚೈ ತಂದೆ

Update: 2023-05-19 17:23 GMT

ಚೆನ್ನೈ: ಗೂಗಲ್ ಸಿಇಒ ಸುಂದರ್ ಪಿಚ್ಚೈ ಅವರ ಪೂರ್ವಜರ ಮನೆಯನ್ನು ತಮಿಳು ನಟ ಹಾಗೂ ನಿರ್ಮಾಪಕ ಸಿ.ಮಣಿಕಂಡನ್ ಖರೀದಿಸಿದ್ದಾರೆ ಎಂದು Hindu Business Line ವರದಿ ಮಾಡಿದೆ.

ಈ ಮನೆಯು ಚೆನ್ನೈನ ಜನವಸತಿ ಪ್ರದೇಶದಲ್ಲಿನ ಅಶೋಕ ನಗರದಲ್ಲಿದ್ದು, ಮಣಿಕಂಡನ್ ಅವರ ಪ್ರಥಮ ಆಸ್ತಿ ಇದಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಣಿಕಂದನ್, “ಸುಂದರ್ ಪಿಚ್ಚೈ ಅವರ ತಂದೆ ತಮ್ಮ ನಿವಾಸವು ಅವರ ಪ್ರಥಮ ಸ್ವತ್ತಾಗಿದ್ದುದರಿಂದ ಸ್ವತ್ತಿನ ದಾಖಲೆಗಳನ್ನು ಹಸ್ತಾಂತರಿಸುವಾಗ ಕೆಲ ಸಮಯ ದುಃಖತಪ್ತರಾದರು” ಎಂದು ತಿಳಿಸಿದ್ದಾರೆ. 

ಆಸ್ತಿಯೊಂದರ ಖರೀದಿಗೆ ಪ್ರಯತ್ನಿಸುತ್ತಿದ್ದ ಮಣಿಕಂದನ್ ಅವರಿಗೆ ಸುಂದರ್ ಪಿಚ್ಚೈ ಹುಟ್ಟಿ ಬೆಳೆದ ಮನೆಯೊಂದು ಮಾರಾಟಕ್ಕಿದೆ ಎಂಬ ಸಂಗತಿ ತಿಳಿದ ಕೂಡಲೇ ಅದನ್ನು ಖರೀದಿಸಲು ನಿರ್ಧರಿಸಿದರು ಎಂದು ವರದಿಯಾಗಿದೆ.

“ಸುಂದರ್ ಪಿಚ್ಚೈ ಇಡೀ ದೇಶ ಹೆಮ್ಮೆ ಪಡುವಂತೆ ಮಾಡಿದ್ದು, ಅವರು ವಾಸಿಸುತ್ತಿದ್ದ ಮನೆಯನ್ನು ಖರೀದಿಸಿದ್ದು ನನ್ನ ಜೀವನದ ಹೆಮ್ಮೆಯ ಸಾಧನೆಯಾಗಿದೆ” ಎಂದು ಮಣಿಕಂಡನ್ ಈ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

“ವಾಸ್ತವವಾಗಿ ಪಿಚ್ಚೈ ಅವರ ತಂದೆ ನೋಂದಣಿ ಕಚೇರಿಯಲ್ಲಿ ಗಂಟೆಗಟ್ಟಲೆ ಕಾದು, ಅಗತ್ಯ ತೆರಿಗೆಗಳನ್ನು ಪಾವತಿಸಿದ ನಂತರ ಮಾರಾಟ ದಾಖಲೆಗಳನ್ನು ನನಗೆ ಹಸ್ತಾಂತರಿಸಿದರು” ಎಂದೂ ಅವರು ಹೇಳಿದ್ದಾರೆ.

ರಿಯಲ್ ಎಸ್ಟೇಟ್ ಡೆವಲಪರ್ ಆಗಿರುವ ಮಣಿಕಂಡನ್, ಈವರೆಗೆ 300 ಮನೆಗಳನ್ನು ನಿರ್ಮಿಸಿ ಮಾರಾಟ ಮಾಡಿದ್ದಾರೆ.

Similar News