ಪರ್ಕಳ: ಮೇ 21ರಿಂದ ತಾಳಮದ್ದಲೆ ಸಪ್ತಾಹ ಉದ್ಘಾಟನೆ
Update: 2023-05-20 15:47 GMT
ಉಡುಪಿ, ಮೇ 20: ಯಕ್ಷಗಾನ ಕಲಾರಂಗ ಪ್ರತಿ ವರ್ಷ ಆಚರಿಸುತ್ತಾ ಬಂದ ತಾಳಮದ್ದಲೆ ಸಪ್ತಾಹ ಈ ಬಾರಿ ಮೇ 21ರಿಂದ 27ರವರೆಗೆ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ. ಸಪ್ತಾಹದ ಉದ್ಘಾಟನೆ ನಾಳೆ ರವಿವಾರ ಸಂಜೆ 5 ಗಂಟೆಗೆ ಪರ್ಕಳದ ವಿಘ್ನೇಶ್ವರ ಸಭಾಭವನದಲ್ಲಿ ನಡೆಯಲಿದೆ.
ಪರ್ಕಳದ ಡಾ.ಕಬ್ಯಾಡಿ ಹರಿರಾಮ ಆಚಾರ್ಯರು ಸಪ್ತಾಹವನ್ನು ಉದ್ಘಾಟಿಸುವರು. ಉಡುಪಿಯ ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಬಿ.ರಾಜಗೋಪಾಲ್ ಆಚಾರ್ಯ, ದಿಲೀಪ್ ರಾಜ್ ಹೆಗ್ಡೆ ಹಾಗೂ ಗಣೇಶ ಪಾಟೀಲ್ ಪಾಲ್ಗೊಳ್ಳುವರು.
ಉದ್ಘಾಟನಾ ಸಮಾರಂಭದ ಬಳಿಕ ಸಂಜೆ 5:30ರಿಂದ 8:30ರ ವರೆಗೆ ‘ಭೀಷ್ಮಾರ್ಜುನ’ ತಾಳಮದ್ದಲೆ ಪ್ರಸ್ತುತಗೊಳ್ಳಲಿದೆ ಎಂದು ಕಲಾರಂಗದ ಅಧ್ಯಕ್ಷ ಎಂ.ಗಂಗಾಧರರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.