ಡೆಲ್ಲಿ-ಚೆನ್ನೈ ಪಂದ್ಯ ವೀಕ್ಷಿಸಲು ಫಿರೋಝ್ ಷಾ ಕೋಟ್ಲಾ ಸ್ಟೇಡಿಯಮ್ ಪ್ರವೇಶಿಸಲು ಬಿಡಲಿಲ್ಲ: ಕುಸ್ತಿಪಟುಗಳ ಆರೋಪ

Update: 2023-05-21 09:24 GMT

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿರುವ  ಅರುಣ್ ಜೇಟ್ಲಿ ಸ್ಟೇಡಿಯಂನ ಹೊರಗೆ  ಶನಿವಾರ ನಿಂತಿದ್ದ  ಭಾರತದ ಕೆಲವು ಪ್ರಮುಖ ಕುಸ್ತಿಪಟುಗಳು  ಡೆಲ್ಲಿ ಕ್ಯಾಪಿಟಲ್ಸ್ ಹಾಗೂ  ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್  ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣದ ಒಳಗೆ ಪ್ರವೇಶಿಸಲು ನಮಗೆ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದರು.

“ನಾವು ಪಂದ್ಯ ವೀಕ್ಷಿಸಲು ಬಂದಿದ್ದೆವು. ಐವರ ಬಳಿಯೂ ಪಂದ್ಯದ ಟಿಕೆಟ್ ಇತ್ತು. ಅವರು ನಮ್ಮ ಟಿಕೆಟ್‌ಗಳನ್ನು ಪರಿಶೀಲಿಸಿದರು ಹಾಗೂ  ನಮಗೆ ಅವಕಾಶ ನೀಡುವುದಿಲ್ಲ ಅವರು ಹೇಳಿದರು’’ ಎಂದು  ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಹೇಳಿದರು.

 "ಇದು ಭದ್ರತಾ ಸಮಸ್ಯೆಯಾಗಿದೆ ಹಾಗೂ  ನಮ್ಮನ್ನು ವಿಐಪಿ ಪ್ರದೇಶದಲ್ಲಿ ಕೂರಿಸುತ್ತೇವೆ ಎಂದು ಅವರು ನಮಗೆ ಹೇಳಿದರು. ಇಲ್ಲ, ನಾವು ಟಿಕೆಟ್‌ಗಳನ್ನು ಹೊಂದಿರುವ ಆಸನಗಳಿಂದಲೇ ಪಂದ್ಯವನ್ನು ವೀಕ್ಷಿಸಲು ಬಯಸುತ್ತೇವೆ’ ಎಂದು ಅವರಿಗೆ ನಾವು ಹೇಳಿದೆವು ಎಂದು ಫೋಗಟ್ ಹೇಳಿದ್ದಾರೆ.

ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳು ಎಪ್ರಿಲ್ 21 ರಂದು ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಕುಸ್ತಿ  ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಪ್ರತಿಭಟನಾ ನಿರತ ಕುಸ್ತಿಪಟುಗಳು ಒತ್ತಾಯಿಸುತ್ತಿದ್ದಾರೆ.

ಪೊಲೀಸರು ಎಫ್‌ಐಆರ್ ದಾಖಲಿಸದಿದ್ದಾಗ ಕುಸ್ತಿಪಟುಗಳು  ಎಪ್ರಿಲ್ 23 ರಂದು ಧರಣಿ ಸತ್ಯಾಗ್ರಹ ನಡೆಸಿದರು.

Similar News