ಕಪ್ಪು ಹಣ ಉಳ್ಳವರಿಗೆ 2 ಸಾವಿರ ರೂ.ಗಳ ನೋಟು ಸಹಾಯ ಮಾಡಿದೆ: ಪಿ.ಚಿದಂಬರಂ

Update: 2023-05-22 15:24 GMT

ಹೊಸದಿಲ್ಲಿ: 2,000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಕೇಂದ್ರದ ಕ್ರಮವನ್ನು ಟೀಕಿಸಿದ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ, 2,000 ರೂಪಾಯಿ ಮುಖಬೆಲೆಯ ನೋಟು "ಕಪ್ಪುಹಣವನ್ನು ಸಂಗ್ರಹಕರಿಗೆ ತಮ್ಮ ಹಣವನ್ನು ಸುಲಭವಾಗಿ ಸಂಗ್ರಹಿಸಲು ಸಹಾಯ ಮಾಡಿದೆ" ಎಂದು ಸೋಮವಾರ ಹೇಳಿದ್ದಾರೆ.

 “2,000 ರೂಪಾಯಿ ನೋಟುಗಳನ್ನು ಬದಲಾಯಿಸಲು ಯಾವುದೇ ಗುರುತು, ಯಾವುದೇ ಪುರಾವೆ ಅಗತ್ಯವಿಲ್ಲ ಎಂದು ಬ್ಯಾಂಕ್‌ಗಳು ಸ್ಪಷ್ಟಪಡಿಸಿವೆ. ಕಪ್ಪುಹಣವನ್ನು ಹೊರತರಲು 2000 ರೂಪಾಯಿ ನೋಟುಗಳನ್ನು ಹಿಂಪಡೆಯಲಾಗುತ್ತಿದೆ ಎಂಬ ಬಿಜೆಪಿಯ ವಾದ ಧ್ವಂಸಗೊಂಡಿದೆ. ಸಾಮಾನ್ಯ ಜನರ ಬಳಿ 2000 ರೂಪಾಯಿ ನೋಟು ಇಲ್ಲ. 2016 ರಲ್ಲಿ ಆ ನೋಟುಗಳು ಬಂದಾಗಿನಿಂದ ಯಾರೂ ಅದನ್ನು ಬಳಸುತ್ತಿಲ್ಲ. ಯಾಕೆಂದರೆ, ದೈನಂದಿನ ಚಿಲ್ಲರೆ ವಿನಿಮಯಕ್ಕೆ ಅವು ನಿಷ್ಪ್ರಯೋಜಕವಾಗಿದ್ದವು. ಹಾಗಾದರೆ 2000 ರೂಪಾಯಿ ನೋಟುಗಳನ್ನು ಇಟ್ಟುಕೊಂಡು ಬಳಸಿದ್ದು ಯಾರು? ಉತ್ತರ ನಿಮಗೆ ಗೊತ್ತಿದೆ” ಎಂದು ಚಿದಂಬರಂ ಟ್ವೀಟ್‌ ಮಾಡಿದ್ದಾರೆ. 

"2,000 ರೂ. ನೋಟು ಕಪ್ಪು ಹಣ ಸಂಗ್ರಹಕಾರರಿಗೆ ತಮ್ಮ ಹಣವನ್ನು ಸುಲಭವಾಗಿ ಸಂಗ್ರಹಿಸಲು ಸಹಾಯ ಮಾಡಿತು. 2000 ರೂ. ನೋಟುಗಳನ್ನು ಇಟ್ಟುಕೊಂಡವರನ್ನು ತಮ್ಮ ನೋಟುಗಳನ್ನು ಬದಲಾಯಿಸಲು ಕೆಂಪು ಹಾಸಿಗೆ ಹಾಸಿ ಸ್ವಾಗತಿಸಲಾಗುತ್ತಿದೆ!. 2016 ರಲ್ಲಿ ರೂ 2,000 ನೋಟನ್ನು ಪರಿಚಯಿಸಿರುವುದು ಒಂದು ಮೂರ್ಖ ಕ್ರಮವಾಗಿತ್ತು. ಕನಿಷ್ಠ 7 ವರ್ಷಗಳ ನಂತರವಾದರೂ ಮೂರ್ಖ ಕ್ರಮವನ್ನು ಹಿಂತೆಗೆದುಕೊಳ್ಳಲಾಗುತ್ತಿದೆ ಎಂದು ನನಗೆ ಸಂತೋಷವಾಗಿದೆ." ಎಂದು ಚಿದಂಬರಂ ಹೇಳಿದ್ದಾರೆ.

Similar News