ಮೋದಿ ಸರ್ಕಾರದ ದುರಹಂಕಾರದಿಂದ ಸಂಸದೀಯ ವ್ಯವಸ್ಥೆಯ ನಾಶ: ಮಲ್ಲಿಕಾರ್ಜುನ ಖರ್ಗೆ

Update: 2023-05-25 07:35 GMT

ಹೊಸದಿಲ್ಲಿ: ಮೇ 28 ರಂದು ಉದ್ಘಾಟನೆಗೊಳ್ಳಲಿರುವ ಸಂಸತ್ ಭವನದ ಕಾರ್ಯಕ್ರಮಕ್ಕೆ ಬಾರತದ ರಾಷ್ಟ್ರಪತಿಗಳನ್ನು ಆಹ್ವಾನಿಸದೇ ಇರುವುದು ಹಲವು ಟೀಕೆಗಳಿಗೆ ಕಾರಣವಾಗಿದ್ದು, ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಪ್ರತಿಕ್ರಿಯಿಸಿದ್ದಾರೆ.


ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಖರ್ಗೆ, ಮೋದಿ ಜೀ.. ಸಂಸತ್ತು ಜನರು ಸ್ಥಾಪಿಸಿದ ಪ್ರಜಾಪ್ರಭುತ್ವದ ದೇವಾಲಯವಾಗಿದೆ. ಅಧ್ಯಕ್ಷರ ಕಚೇರಿ ಸಂಸತ್ತಿನ ಮೊದಲ ಅಂಗವಾಗಿದೆ. ನಿಮ್ಮ ಸರ್ಕಾರದ ದುರಹಂಕಾರವು ಸಂಸದೀಯ ವ್ಯವಸ್ಥೆಯನ್ನು ನಾಶಪಡಿಸಿದೆ ಎಂದು ಹೇಳಿದ್ದಾರೆ.

ಭಾರತದ ರಾಷ್ಟ್ರಪತಿಗಳಿಂದ ಸಂಸತ್ ಭವನವನ್ನು ಉದ್ಘಾಟಿಸುವ ಹಕ್ಕನ್ನು ಕಸಿದುಕೊಳ್ಳುವ ಮೂಲಕ ನೀವು ಏನನ್ನು ತೋರಿಸಲು ಬಯಸುತ್ತೀರಿ ಎಂದು 140 ಕೋಟಿ ಭಾರತೀಯರು ತಿಳಿಯಲು ಬಯಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

Similar News