ನ್ಯಾವಿಗೇಷನ್ ಉಪಗ್ರಹ NVS-01 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

Update: 2023-05-29 07:28 GMT

ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸೋಮವಾರ ಬೆಳಗ್ಗೆ  ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ GSLV-F12  ರಾಕೆಟ್ ನಲ್ಲಿ ನ್ಯಾವಿಗೇಷನ್ ಉಪಗ್ರಹ  NVS-01 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

 ಉಡಾವಣೆಗೊಂಡ ಸುಮಾರು 20 ನಿಮಿಷಗಳ ನಂತರ  ರಾಕೆಟ್ ಸುಮಾರು 251 ಕಿಮೀ ಎತ್ತರದಲ್ಲಿ ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಯಲ್ಲಿ (ಜಿಟಿಒ) ನ್ಯಾವಿಗೇಷನ್ ಉಪಗ್ರಹವನ್ನು ಯಶಸ್ವಿಯಾಗಿ ಸೇರಿಸಿದೆ  ಎಂದು ಇಸ್ರೋ ಹೇಳಿದೆ.

ಬಾಹ್ಯಾಕಾಶ ಕೇಂದ್ರದ 2ನೇ ಉಡಾವಣಾ ನೆಲೆಯಿಂದ ಬೆಳಗ್ಗೆ 10:42ರ ಸುಮಾರಿಗೆ 51.7 ಮೀಟರ್ ಎತ್ತರದ ರಾಕೆಟ್ ಆಕಾಶಕ್ಕೆ ಚಿಮ್ಮಿದೆ.

"ನಾವು ಈಗ ಇನ್ನೂ ದೊಡ್ಡ ಪೇಲೋಡ್‌ಗಳನ್ನು ಆರಂಭಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ" ಎಂದು ಇಸ್ರೋ ಹೇಳಿದೆ.

ನಾವು  ಎರಡನೇ ತಲೆಮಾರಿನ ನ್ಯಾವಿಗೇಶನ್ ಉಪಗ್ರಹ ಸರಣಿಯನ್ನು ಆರಂಭಿಸುತ್ತಿದ್ದೇವೆ.  NavIC (ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್ಸ್ಟೆಲೇಷನ್) ಸೇವೆಗಳ ನಿರಂತರತೆಯನ್ನು ಖಚಿತಪಡಿಸುವ ವಿಷಯದಲ್ಲಿ 2ನೇ ತಲೆಮಾರಿನ ಈ ಉಪಗ್ರಹದ ಉಡಾವಣೆಯು ಅತ್ಯಂತ ಮಹತ್ವದ್ದು ಎನಿಸಿಕೊಂಡಿದೆ' ಎಂದು ಇಸ್ರೋ ಹೇಳಿದೆ.

Similar News