ಇಸ್ಪೀಟು ಜುಗಾರಿ: 18 ಮಂದಿ ಬಂಧನ
Update: 2023-06-01 15:45 GMT
ಮಲ್ಪೆ, ಜೂ.1: ಇಸ್ಪೀಟು ಜುಗಾರಿ ಆಡುತ್ತಿದ್ದ 18 ಮಂದಿಯನ್ನು ಮಲ್ಪೆ ಪೊಲೀಸರು ಕೊಡವೂರು ಬಳಿ ಬುಧವಾರ ಬಂಧಿಸಿದ್ದಾರೆ.
ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು, ಜೂಜಾಟ ಆಡುತ್ತಿದ್ದ 18 ಮಂದಿಯನ್ನು ವಶಕ್ಕೆ ಪಡೆದು 1,72,080ರೂ. ನಗದು 18 ಮೊಬೈಲ್ ಹಾಗೂ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.