ಬಿಜೆಪಿಯನ್ನು ಸೋಲಿಸಲು ಎನ್ ಡಿಎ vs ಪಿಡಿಎ ಸೂತ್ರ ಬಹಿರಂಗಪಡಿಸಿದ ಅಖಿಲೇಶ್ ಯಾದವ್

Update: 2023-06-17 07:46 GMT

ಲಕ್ನೊ : ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಶನಿವಾರ  ಲಕ್ನೋದಲ್ಲಿ ನಡೆದ  NDTV Conclaveನಲ್ಲಿ 2024 ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸುವ ತಮ್ಮ ಸೂತ್ರವನ್ನು ಬಹಿರಂಗಪಡಿಸಿದರು.

“ಪಿಡಿಎ-ಪಿಚ್ಲೆ, ದಲಿತ್, ಅಲ್ಪಸಂಖ್ಯಾಕ್ (ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರು) -- ಎನ್‌ಡಿಎಯನ್ನು ಸೋಲಿಸುತ್ತವೆ’’ ಎಂದು ಯಾದವ್ ಪ್ರತಿಪಾದಿಸಿದರು.

ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಪ್ರತಿಪಕ್ಷಗಳ ಮಹಾ ಒಕ್ಕೂಟದ ಬಗ್ಗೆ ತಮ್ಮ ಪಕ್ಷದ ದೃಷ್ಟಿಕೋನದ ಬಗ್ಗೆ ಕೇಳಿದಾಗ,

" ಉತ್ತರಪ್ರದೇಶದಲ್ಲಿ 80ನ್ನು ಸೋಲಿಸಿ, ಬಿಜೆಪಿಯನ್ನುತೊಡೆದುಹಾಕಿ ಎಂಬ ಏಕೈಕ ಘೋಷಣೆ ನಮ್ಮದ್ದಾಗಿದೆ. ದೊಡ್ಡ ರಾಷ್ಟ್ರೀಯ ಪಕ್ಷಗಳು ನಮಗೆ ಬೆಂಬಲ ನೀಡಿದರೆ ಉತ್ತರಪ್ರದೇಶದಲ್ಲಿ ಎಲ್ಲಾ 80 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿಯನ್ನು ಸೋಲಿಸಲಾಗುವುದು. ನಿರ್ದಿಷ್ಟ ರಾಜ್ಯದಲ್ಲಿ ಯಾವ ಮೈತ್ರಿಕೂಟವು ಪ್ರಬಲವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸೀಟು ಹಂಚಿಕೆಯನ್ನು ನಿರ್ಧರಿಸಬೇಕು " ಎಂದು ಅಖಿಲೇಶ್ ಯಾದವ್   ಒತ್ತಾಯಿಸಿದರು.

ರಾಜ್ಯ ಹಾಗೂ ರಾಷ್ಟ್ರೀಯ ಚುನಾವಣೆಗಳಲ್ಲಿ  ಕಾಂಗ್ರೆಸ್  ಹಾಗೂ  ಮಾಯಾವತಿಯವರ ಬಿಎಸ್‌ಪಿಯೊಂದಿಗೆ ತಮ್ಮ ಪಕ್ಷದ ಹಿಂದಿನ ಮೈತ್ರಿಗಳನ್ನು ಉಲ್ಲೇಖಿಸಿದ  ಯಾದವ್, ಸಮಾಜವಾದಿ ಪಕ್ಷವು ಯಾವಾಗಲೂ ಪ್ರಾಮಾಣಿಕ  ಹೊಂದಾಣಿಕೆಯ ಮೈತ್ರಿ ಪಾಲುದಾರ ಎಂದು ಪ್ರತಿಪಾದಿಸಿದರು.

ಎಸ್‌ಪಿ ಮೈತ್ರಿ ಮಾಡಿಕೊಂಡಿರುವ ಎಲ್ಲ ಕಡೆಯಲ್ಲಿ  ನಾವು ಸೀಟು ವಿಚಾರದಲ್ಲಿ ಜಗಳವಾಡುತ್ತಿರುವುದನ್ನು ನೀವು ಕೇಳಿರಲಿಕ್ಕಿಲ್ಲ ಎಂದು ಅವರು ಹೇಳಿದರು

Similar News