'ದೇಶದ ಕ್ಷಮೆಯಾಚಿಸಿ': 'ಆದಿಪುರುಷ' ನಿರ್ಮಾಪಕರಿಗೆ ಶಿವಸೇನೆ ಆಗ್ರಹ

Update: 2023-06-17 09:00 GMT

ಹೊಸದಿಲ್ಲಿ: ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಶನಿವಾರ 'ಆದಿಪುರುಷ' ಚಿತ್ರದ ನಿರ್ಮಾಪಕರ ವಿರುದ್ಧ ಕೀಳುಮಟ್ಟದ  ಸಂಭಾಷಣೆ'ಗಳನ್ನು ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.

ಚಿತ್ರದ ನಿರ್ಮಾಪಕರು  ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ ಪ್ರಿಯಾಂಕಾ ಅವರು ಚಿತ್ರದಲ್ಲಿನ  ಸಂಭಾಷಣೆಗಳು ಹಿಂದೂ ಮಹಾಕಾವ್ಯ ರಾಮಾಯಣದ ಪಾತ್ರಗಳಿಗೆ ಅಗೌರವವಾಗಿದೆ ಎಂದು ಹೇಳಿದರು.

'ಆದಿಪುರುಷ' ಚಿತ್ರಕ್ಕೆ ಸಂಭಾಷಣೆ ಬರೆದಿರುವ  ಮನೋಜ್‌ಮುಂತಾಶಿರ್ ಹಾಗೂ ನಿರ್ದೇಶಕರು ಚಿತ್ರಕ್ಕಾಗಿ ವಿಶೇಷವಾಗಿ ಹನುಮಂತನಿಗಾಗಿ ಬರೆದಿರುವ ಕೀಳುಮಟ್ಟದ  ಸಂಭಾಷಣೆಗಳಿಗಾಗಿ ರಾಷ್ಟ್ರದ ಕ್ಷಮೆಯಾಚಿಸಬೇಕು" ಎಂದು ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.

ಮನರಂಜನೆಯ ಹೆಸರಿನಲ್ಲಿ ನಮ್ಮ ಪೂಜ್ಯ ದೇವರುಗಳಿಗೆ ಈ ರೀತಿಯ ಭಾಷೆಯನ್ನು ಬಳಸುವುದು ಪ್ರತಿಯೊಬ್ಬ ಭಾರತೀಯನ ಸಂವೇದನೆಗೆ ಘಾಸಿಗೊಳಿಸುತ್ತದೆ. ಮರ್ಯಾದಾ ಪುರುಷೋತ್ತಮ್ ರಾಮ್ ಅವರ ಮೇಲೆ ನೀವು ಚಲನಚಿತ್ರವನ್ನು ನಿರ್ಮಿಸುತ್ತೀರಿ ಮತ್ತು ತ್ವರಿತ ಗಲ್ಲಾಪೆಟ್ಟಿಗೆ ಯಶಸ್ಸಿಗಾಗಿ ಮರ್ಯಾದೆಯ  ಎಲ್ಲಾ ಗಡಿಗಳನ್ನು ದಾಟಿರುವುದು ಸ್ವೀಕಾರಾರ್ಹವಲ್ಲ, ”ಎಂದು ಅವರು ಹೇಳಿದರು.

Similar News