ಸುಡಾನ್: 72 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಗೆ‌

Update: 2023-06-18 18:17 GMT

ಖಾರ್ಟಮ್, ಜೂ.18: ದೇಶಕ್ಕೆ ಅತೀ ಅಗತ್ಯವಿರುವ ನೆರವನ್ನು ಒದಗಿಸಲು ಅನುಕೂಲ ಮಾಡುವ ನಿಟ್ಟಿನಲ್ಲಿ ರವಿವಾರದಿಂದ 72 ಗಂಟೆಗಳ ಯುದ್ಧವಿರಾಮ ಜಾರಿಗೆ ಸುಡಾನ್‌ನ ಸೇನೆ ಹಾಗೂ ಅರೆಸೇನಾ ಪಡೆ ಸಮ್ಮತಿಸಿದೆ ಎಂದು ವರದಿಯಾಗಿದೆ.

ಎಪ್ರಿಲ್ 15ರಿಂದ ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನಾ ಪಡೆ ನಡುವೆ ಸಂಘರ್ಷ ನಡೆಯುತ್ತಿದೆ. ಅಮೆರಿಕ-ಸೌದಿ ಅರೆಬಿಯಾದ ಮಧ್ಯಸ್ಥಿಕೆಯಲ್ಲಿ ಹಲವು ಬಾರಿ ಕದನ ವಿರಾಮ ಜಾರಿಗೆ ಬಂದಿದ್ದರೂ ಕೆಲವೇ ದಿನಗಳಲ್ಲಿ ಅದು ವಿಫಲವಾಗಿತ್ತು.

ಇದೀಗ ರವಿವಾರ ಬೆಳಿಗ್ಗೆ 6 ಗಂಟೆ(ಸ್ಥಳೀಯ ಕಾಲಮಾನ)ಯಿಂದ ಮುಂದಿನ 72 ಗಂಟೆಗಳ ಅವಧಿಯಲ್ಲಿ ಮತ್ತೆ ಕದನ ವಿರಾಮ ಜಾರಿಗೆ ಉಭಯ ಪಡೆಗಳೂ ಸಮ್ಮತಿಸಿವೆ ಎಂದು ವರದಿಯಾಗಿದೆ.

Similar News