ಈಜಿಪ್ಟ್‌ನ 11ನೇ ಶತಮಾನದ ಮಸೀದಿಗೆ ಭೇಟಿ ನೀಡಲಿರುವ ಮೋದಿ

Update: 2023-06-19 18:01 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ತನ್ನ ಈಜಿಪ್ಟ್ ಪ್ರವಾಸದ ವೇಳೆ 11ನೇ ಶತಮಾನದ ಅಲ್ ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ. ಈ ಮಸೀದಿಯನ್ನು ದಾವೂದಿ ಬೊಹ್ರಾ ಸಮುದಾಯದ ನೆರವಿನೊಂದಿಗೆ ನವೀಕರಿಸಲಾಗಿತ್ತು.

ಮೊದಲ ಮಹಾಯುದ್ಧದ ವೇಳೆ, ಈಜಿಪ್ಟ್‌ಗಾಗಿ ಪ್ರಾಣ ತ್ಯಾಗ ಮಾಡಿದ್ದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವುದಕ್ಕಾಗಿ ಹೆಲಿಯೊಪೊಲಿಸ್ ಯುದ್ಧ ಸ್ಮಾರಕಕ್ಕೂ ಮೋದಿ ಭೇಟಿ ನೀಡಲಿದ್ದಾರೆ.

ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್-ಸಿಸಿ ಅವರ ಆಹ್ವಾನದಂತೆ ಮೋದಿ ಜೂನ್ 24ರಿಂದ ಎರಡು ದಿನಗಳ ಕಾಲ ಈಜಿಪ್ಟ್ ಪ್ರವಾಸ ಕೈಗೊಳ್ಳಲಿದ್ದಾರೆ. 1997ರ ಬಳಿಕ ಭಾರತೀಯ ಪ್ರಧಾನಿಯೊಬ್ಬರು ಈಜಿಪ್ಟ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

Similar News