'ಸರ್ವರ್' ಸಮಸ್ಯೆ ಸರಿಪಡಿಸಿ ಶ್ರೀಘ್ರವೇ 'ಗೃಹಲಕ್ಷ್ಮಿ' ನೋಂದಣಿ ಆರಂಭ: ಸಚಿವೆ ಹೆಬ್ಬಾಳ್ಕರ್

Update: 2023-06-22 07:11 GMT

ಬೆಳಗಾವಿ, ಜೂ. 22: ಸರ್ವರ್ ಸಮಸ್ಯೆ ಹಿನ್ನಲೆಯಲ್ಲಿ ನಮ್ಮ ಸರಕಾರದ ಪ್ರಮುಖ ಗ್ಯಾರಂಟಿ ಗಳಲ್ಲಿ ಒಂದಾದ ‘ಗೃಹ ಜ್ಯೋತಿ’ ಯೋಜನೆ ನೋಂದಣಿ ವಿಳಂಬವಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಮಾತನಾಡಿದ ಅವರು, ‘ಗೃಹ ಲಕ್ಷ್ಮಿ’ ಯೋಜನೆಯ ನೋಂದಣಿಗೆ ಸರ್ವರ್ ಗುಣಮಟ್ಟ ಹೆಚ್ಚಿಸಿ ಶೀಘ್ರದಲ್ಲೇ ನೋಂದಣಿ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದರು.

ಅನ್ನ ಭಾಗ್ಯ ಯೋಜನೆಗೆ ಕೇಂದ್ರ ಸರಕಾರಕ್ಕೆ ಕಣ್ಣು ಕಿವಿ ಹಾಗೂ ಹೃದಯವಂತೂ ಇಲ್ಲ. ಇದು ‘ಕೇಂದ್ರಕ್ಕೆ ಬಿಸಿ ಮುಟ್ಟುತ್ತೊ ಇಲ್ವೊ, ಆಮೇಲೆ ನೋಡೋಣ. ಮೊದಲು 25 ಮಂದಿ ಸಂಸದರು ಕಣ್ಣು ತೆಗೆಯಲಿ ಎಂದು ಅವರು ಆಗ್ರಹಿಸಿದರು.

ಒಂದು ವರ್ಷದಲ್ಲಿ ಲೋಕಸಭಾ ಚುನಾವಣೆ ಬರಲಿದೆ. ರಾಜ್ಯದ ಮಹಾಜನತೆ ಅರ್ಥ ಮಾಡಿಕೊಳ್ಳಲಿ. ಚುನಾವಣೆ ಬಂದಾಗ ಜನರ ಓಲೈಕೆಗೆ ಬರುತ್ತಾರೆ. ಆದರೆ, ಇವತ್ತು ಬಡವರಿಗೆ ನೀಡಬೇಕಾದ ಅಕ್ಕಿಯನ್ನು ಒದಗಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಅವರು ದೂರಿದರು.

Similar News