ನಂದಿನಿ ಹಾಲಿನ ದರ ಹೆಚ್ಚಳ ವಿಚಾರ; ಬಡ ಜನರ ಮೇಲೆ ಬರೆ ಎಂದ ಬಿಜೆಪಿ
ಬೆಂಗಳೂರು: ನಂದಿನಿ ಹಾಲಿನ ದರವನ್ನು ಲೀಟರಿಗೆ 5 ರೂ. ಹೆಚ್ಚಿಸುತ್ತೇವೆ ಎಂಬ ಕೆಎಂಫ್ ನ ನೂತನ ಅಧ್ಯಕ್ಷ ಭೀಮಾ ನಾಯ್ಕ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ವಿಪಕ್ಷ ಬಿಜೆಪಿ, ''ಕೆಎಂಫ್ ಅಧ್ಯಕ್ಷರು ಹಾಲಿನ ದರವನ್ನು ಲೀಟರಿಗೆ 5 ರೂ. ಹೆಚ್ಚಿಸುತ್ತೇವೆ ಎಂದು ಏಕಾಏಕಿ ಹೇಳುವ ಮೂಲಕ ರಾಜ್ಯದ ಪ್ರಜೆಗಳ ಜೇಬಿಗೆ ಕನ್ನ ಹಾಕಿದೆ'' ಎಂದು ಕಿಡಿಕಾರಿದೆ.
''ಸಿದ್ದರಾಮಯ್ಯ ರವರ #ATMSarkara ದಲ್ಲಿ ಈಗಾಗಲೇ ದಿನ ಬಳಕೆ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಇದೀಗ ಹಾಲಿನ ದರವನ್ನೂ ಏರಿಸುವ ಮೂಲಕ ರಾಜ್ಯದ ಬಡ ಜನರ ಮೇಲೆ ಬರೆ ಎಳೆಯುತ್ತಿದೆ. ಈ ಜನದ್ರೋಹಿ ನಿರ್ಧಾರದಿಂದ ಸರ್ಕಾರ ದೂರ ಉಳಿಯಬೇಕೆಂದು ಬಿಜೆಪಿ ಆಗ್ರಹಿಸುತ್ತದೆ'' ಎಂದು ಹೇಳಿದೆ.
ಕೆಎಂಫ್ ಅಧ್ಯಕ್ಷರು ಹಾಲಿನ ದರವನ್ನು ಲೀಟರಿಗೆ ₹5 ಹೆಚ್ಚಿಸುತ್ತೇವೆ ಎಂದು ಏಕಾಏಕಿ ಹೇಳುವ ಮೂಲಕ ರಾಜ್ಯದ ಪ್ರಜೆಗಳ ಜೇಬಿಗೆ ಕನ್ನ ಹಾಕಿದೆ. @siddaramaiah ರವರ #ATMSarkara ದಲ್ಲಿ ಈಗಾಗಲೇ ದಿನ ಬಳಕೆ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಇದೀಗ ಹಾಲಿನ ದರವನ್ನೂ ಏರಿಸುವ ಮೂಲಕ ರಾಜ್ಯದ ಬಡ ಜನರ ಮೇಲೆ ಬರೆ ಎಳೆಯುತ್ತಿದೆ.
— BJP Karnataka (@BJP4Karnataka) June 22, 2023
ಈ ಜನದ್ರೋಹಿ… pic.twitter.com/9tdroD2qQz