9,10ನೇ ತರಗತಿ ವಿದ್ಯಾರ್ಥಿಗಳಿಗೂ ಮೊಟ್ಟೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ
ಬೆಂಗಳೂರು, ಜೂ.22: ಪ್ರಾಥಮಿಕ ಶಾಲಾ ಮಕ್ಕಳಿಗೆ ಮಾತ್ರವಲ್ಲ, 9 ಹಾಗೂ 10ನೆ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೂ ಮೊಟ್ಟೆ ನೀಡಲು ಗಂಭೀರ ಚಿಂತನೆ ನಡೆಸಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಗುರುವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ವಿತರಿಸಲಾಗುವ ಮೊಟ್ಟೆಗಳಿಗೂ ರಾಜ್ಯ ಕಾಂಗ್ರೆಸ್ ಸರಕಾರ ತಡೆ ನೀಡಲಾಗಿದೆ ಎನ್ನುವುದು ಅಪಪ್ರಚಾರ, ಶಾಲಾ ಮಕ್ಕಳಿಗೆ ಮೊಟ್ಟ ವಿತರಣೆ ನಾವು ತಡೆ ಹಿಡಿದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಅಲ್ಲದೆ, ವರ್ಷಕ್ಕೆ 42 ಬಾರಿ ಮೊಟ್ಟೆ ನೀಡಬೇಕು ಎಂದು ಹಿಂದಿನ ಸರಕಾರ ನಿರ್ಧಾರ ಮಾಡಿತ್ತು. ನಾವು ಮೊಟ್ಟೆ ವಿತರಣೆ ತಡೆ ಹಿಡಿದಿಲ್ಲ. ವರ್ಷಕ್ಕೆ 42 ಮೊಟ್ಟೆಗಳನ್ನು ನೀಡುವುದನ್ನು ಹೆಚ್ಚಳ ಮಾಡುವುದಕ್ಕೆ ನಿರ್ಧಾರ ಮಾಡ್ತಿದ್ದೇವೆ ಎಂದ ಅವರು, ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ರಾಜ್ಯದ ಎಲ್ಲ ಜಿಲ್ಲೆಗಳ ಸರಕಾರಿ ಮತ್ತು ಅನುದಾನಿತ ಶಾಲೆಗಳ 1-8ನೆ ತರಗತಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಬೇಯಿಸಿದ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ ಎಂದರು.