ಬಾಗಲಕೋಟೆ: ಪೆಟ್ರೋಲ್ ಸುರಿದು ಗುಡಿಸಲಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು; ತಾಯಿ-ಮಗಳು ಸಜೀವ ದಹನ

Update: 2024-07-16 06:02 GMT

ಮುಧೋಳ : ದುಷ್ಕರ್ಮಿಗಳು ಗುಡಿಸಲಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ತಾಯಿ-ಮಗಳು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಬೆಳಗಲಿ ಗ್ರಾಮದಲ್ಲಿ ನಡೆದಿದೆ.

ಜೈಬಾನ (60), ಶಬಾನ (20) ಕೊಲೆಯಾದವರು. ಅವಘಡದಲ್ಲಿ ಸಿದ್ದೀಖ್ ಎಂಬಾತ ಬಚಾವಾಗಿದ್ದು, ದಸ್ತಗೀರ್ ಸಾಬ್ ಎಂಬವರು ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಮಹಾಲಿಂಗಪುರ ಆಸ್ಪತ್ರಗೆ ದಾಖಲಿಸಲಾಗಿದೆ.

ದಸ್ತಗೀರ್ ಸಾಬ್ ಅವರ ಕುಟುಂಸ್ಥರು ತೋಟದ ಶೆಡ್ಡಿನಲ್ಲಿ ಮಲಗಿದ್ದಾಗ. ದುಷ್ಕರ್ಮಿಗಳು ಸಿಂಟೆಕ್ಸ್ ನಲ್ಲಿ‌ ಪೆಟ್ರೋಲ್‌ ತುಂಬಿ ಅದನ್ನು ಎರಡು ಎಚ್ ಪಿ ಮೋಟಾರ್ ಸಹಾಯದಿಂದ ಶೆಡ್ಡಿಗೆ ಸಿಂಪಡಿಸಿ‌ ಬೆಂಕಿ ಹಚ್ಚಿದ್ದಾರೆ. ಬೆಂಕಿಹಚ್ಚುವ ಮುನ್ನ ಶೆಡ್ಡಿನ ಬಾಗಿಲವನ್ನು ಲಾಕ್ ಮಾಡಿ ಇಡೀ ಕುಟುಂಬವನ್ನು ಮುಗಿಸಲು ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.

 ಘಟನೆಯಲ್ಲಿ ತಾಯಿ-ಮಗಳ‌ ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಮಹಾಲಿಂಗಪುರ ಪೊಲೀಸರು ಭೇಟಿ ನೀಡಿ‌ ಪರಿಶೀಲಿಸಿದ್ದಾರೆ. ಎಸ್ಪಿ ಅಮರಮಾಥರೆಡ್ಡಿ ಭೇಟಿ‌ ನೀಡಿ ಘಟನೆ ವಿವರಣೆ ಪಡೆದುಕೊಂಡಿದ್ದಾರೆ. ಶ್ವಾನದಳದ ನೆರವಿನಿಂದ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News