ಬಹರೈನ್: ಕೆಸಿಎಫ್ ನಿಂದ ಮೀಲಾದ್ ಕಾನ್ಫರೆನ್ಸ್‌

Update: 2024-09-11 10:14 GMT

ಮನಾಮ : ಪ್ರವಾದಿ ಮುಹಮ್ಮದ್‌ ಪೈಗಂಬರರು ಮಾನವೀಯತೆಯ ಮಾರ್ಗದರ್ಶಿ ಎಂಬ ಘೋಷವಾಕ್ಯದೊಂದಿಗೆ ಮನಾಮ ಕನ್ನಡ ಭವನದಲ್ಲಿ ನಡೆದ ಕೆಸಿಎಫ್ ಬಹರೈನ್ ಅಂತಾರಾಷ್ಟ್ರೀಯ ಮೀಲಾದ್ ಸಮಾವೇಶವು ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಜಮಾಲುದ್ದೀನ್ ವಿಟ್ಲ  ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಸೈಯ್ಯದ್ ಅಲೀ ಬಾಫಕೀ ತಂಙಲ್ ದುಆಗೈದರು. ಶಿಹಾಬ್ ಉಸ್ತಾದ್ ಪರಪ್ಪ ಹಾಗೂ ಆಶ್ರಫ್ ರೆಂಜಾಡಿ ಮೌಲಿದ್ ಹಾಗೂ ಬುರ್ದಾ ಮಜ್ಲಿಸ್‌ಗೆ ನೇತೃತ್ವ ನೀಡಿದರು. ಹಾಫಿಝ್ ದರ್ವೇಸ್ ಅಲೀ ಖಿರಾಅತ್ ಪಠಿಸಿದರು. ಕೆಸಿಎಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯರವರು ಸ್ವಾಗತಿಸಿದರು. ಕೆಸಿಎಫ್ ಐಸಿ ಮಾಜಿ ಪ್ರಧಾನ ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಾಫಿಝ್ ಮಸ್ವೂದ್ ಸಖಾಫಿ ಗೂಡಲ್ಲೂರು ಉಸ್ತಾದ್ ಮುಖ್ಯ ಭಾಷಣ  ಮಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಯೆನೆಪೋಯ ಯುನಿವರ್ಸಿಟಿ ಇದರ ಕುಲಪತಿ ಡಾ.ಯೆನೆಪೋಯ ಅಬ್ದುಲ್ಲಾ ಕುಂಞಿ ಹಾಜಿ, ಕೆಸಿಎಫ್ ನಡೆಸಿಕೊಂಡು ಬರುತ್ತಿರುವ ಧಾರ್ಮಿಕ, ಶೈಕ್ಷಣಿಕ, ಸಾಂತ್ವನ ಮುಂತಾದ ಕಾರ್ಯವೈಖರಿಯನ್ನು ಶ್ಲಾಘಿಸಿ, ಅಭಿನಂದನೆ ಸಲ್ಲಿಸಿದರು.

ಇನ್ನೋರ್ವ ಮುಖ್ಯ ಅತಿಥಿ ಅಲ್ ಹಿಲಾಲ್, ಅಲ್ ಬದ್ರ್ ಶಮಾ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಅಬ್ದುಲ್ ಲತೀಫ್ ಉಪ್ಪಲ ಅವರು ಮಾತನಾಡಿ, ಅತ್ಯಂತ ಅಚ್ಚುಕಟ್ಟಾಗಿ ನಡೆದ ಕೆಸಿಎಫ್‌ ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆರ್‌ಎಸ್‌ಸಿ ಅಧ್ಯಕ್ಷ ಶಿಹಾಬ್ ಉಸ್ತಾದ್ ಪರಪ್ಪ ಹಾಗೂ ಡಿಕೆಎಸ್‌ಸಿ ಬಹರೈನ್ ಕಾರ್ಯಾಧ್ಯಕ್ಷ ಮುಹಮ್ಮದ್ ಸೀದಿ ಹಾಜಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾದ ಡಾ.ಯೆನೆಪೊಯ ಅಬ್ದುಲ್ಲಾ ಕುಂಞಿ ಹಾಜಿಯವರು, ಅಬ್ದುಲ್ ಲತೀಫ್ ಉಪ್ಪಳ, ನ್ಯಾಷನಲ್ ಎಲೈಡ್ ಹೆಲ್ತ್ ಕೇರ್ ಚೇರ್ಮನ್ ಡಾ.ಯು.ಟಿ. ಇಫ್ತಿಕಾರ್ ಅಲಿ, ಉದ್ಯಮಿ ಮನ್ಸೂರ್ ಹೆಜಮಾಡಿ, ಬಹರೈನ್ ಫೈಲೆಂತ್ರೋಫಿಕ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಡಾ. ಹಸನ್ ಕಮಾಲ್ ರವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

 

ಕೆಸಿಎಫ್ ಐಸಿ ಫೈನಾನ್ಸಿಯಲ್ ಕಂಟ್ರೋಲರ್ ಅಲೀ ಮುಸ್ಲಿಯಾರ್ ಕೊಡಗು, ರಾಷ್ಟ್ರೀಯ ಸಮಿತಿ ಮಾಜಿ ಅಧ್ಯಕ್ಷರಾದ ಜನಾಬ್ ಎಸ್.ಎಂ. ಫಾರೂಖ್ ಕುಂಬ್ರ, ಕೆಸಿಎಫ್ ಐಸಿ ರಿಲೀಫ್ ವಿಂಗ್ ಅಧ್ಯಕ್ಷರಾದ ರೇಸ್ಕೋ ಅಬೂಬಕರ್ ಹಾಜಿ, ಕೆಸಿಎಫ್ ಸೌದಿ ಅರೇಬಿಯಾ ನಾಯಕರಾದ ‍ಎನ್.ಎಸ್.ಅಬ್ದುಲ್ಲಾ ಹಾಜಿ, ಫಾರೂಖ್ ಕಾಟಿಪಳ್ಳ, ಬಹರೈನ್ ಉರ್ದು ವಿಂಗ್ ಅಧ್ಯಕ್ಷರಾದ ಗಯಾಝುದ್ದೀನ್ ಮೈಸೂರು ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೆಸಿಎಫ್ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಸೂಫಿ ಪೈಂಬಚ್ಚಾಲ್, ಸಂಘಟನಾ ವಿಭಾಗದ ಅಧ್ಯಕ್ಷರಾದ ಖಲಂದರ್ ಉಸ್ತಾದ್, ಕಾರ್ಯದರ್ಶಿ ಮನ್ಸೂರ್ ಬೆಳ್ಮ, ಸ್ವಾಗತ ಸಮಿತಿ ಕನ್ವೀನರ್ ತೌಫೀಖ್ ಬೆಳ್ತಂಗಡಿ, ಸ್ವಾಗತ ಸಮಿತಿ ವೈಸ್ ಕನ್ವೀನರ್ ಸುಹೈಲ್ ಬಿ.ಸಿ.ರೋಡ್, ವೈಸ್ ಚೇರ್ಮನ್ ಅಶ್ರಫ್ ಕಿನ್ಯ, ಸ್ವಾಗತ ಸಮಿತಿ ಫೈನಾನ್ಸ್ ಕಂಟ್ರೋಲರ್ ನಝೀರ್ ಹಾಜಿ ದೇರಳಕಟ್ಟೆ ಹಾಗೂ ಬಹರೈನ್ ನಲ್ಲಿರುವ ವಿವಿಧ ಸಂಘಟನೆ ಗಳ ನೇತಾರರು ಹಾಗೂ ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ, ಝೋನಲ್, ಸೆಕ್ಟರ್, ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ವಾಗತ ಸಮಿತಿ ಚೇರ್ಮನ್ ಲತೀಫ್ ಪೆರೋಲಿ ಧನ್ಯವಾದವಿತ್ತರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News