ಜಿಗಣಿ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ!; ಸಾರ್ವಜನಿಕರಿಗೆ ಪುರಸಭೆ ಎಚ್ಚರಿಕೆ

Update: 2024-12-30 12:58 GMT

ಆನೇಕಲ್: ಆನೇಕಲ್‌ನ ಜಿಗಣಿಯ ಕೆರೆಯಲ್ಲಿ ಮೊಸಳೆಯೊಂದು ಜನತೆಯ ಕಣ್ಣಿಗೆ ಬೀಳುತ್ತಿದ್ದು, ಇದೀಗ ಅದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಮೊಸಳೆಯ ಇರುವಿಕೆ ಖಾತರಿಯಾಗಿದೆ.

ಕೆರೆಯ ನೀರಿನ ಮರದ ತುಂಡಿನ ಮೇಲೆ ಮೊಸಳೆ ಮಲಗಿರುವುದು ಹಾಗು ನೀರಿನೊಳಕ್ಕೆ ಮೊಸಳೆ ಮುಳುಗಿರುವುದು ಮೊಬೈಲ್ ದೃಶ್ಯಗಳಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಕೂಡಲೇ ಎಚ್ಚೆತ್ತ ಜಿಗಣಿ ಪುರಸಭೆಯ ಮುಖ್ಯಾಧಿಕಾರಿ ರಾಜೇಶ್ ದೃಶ್ಯಗಳೊಂದಿಗೆ ಅರಣ್ಯಾಧಿಕಾರಿಗಳು, ವನ್ಯ ಜೀವಿ ಸಂರಕ್ಷಣಾ ಇಲಾಖೆ ಹಾಗು ಮೀನುಗಾರಿಕೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪುರಸಭೆಯಿಂದ ಕೆರೆಯ ಕಟ್ಟೆ, ಸುತ್ತಮುತ್ತಲಿನ ಪರಿಸರದಲ್ಲಿ ಎಚ್ಚರಿಕೆಯಿಂದ ಇರುವಂತೆ ಧ್ವನಿವರ್ದಕದ ಮೂಲಕ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News