ಬೆಂಗಳೂರು | ಹವಾಲ ದಂಧೆಯಲ್ಲಿ ತೊಡಗಿದ್ದ ಮೂವರ ಬಂಧನ

Update: 2024-10-18 15:51 GMT

ಬೆಂಗಳೂರು: ಹವಾಲ ದಂಧೆಯಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಆಗ್ನೇಯ ವಿಭಾಗದ ಸಿಐಎನ್ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಹುಬ್ಬಳ್ಳಿ ಮೂಲದ ಅಮನ್(25) ಮತ್ತು ಅಹಮದಾಬಾದ್ ಮೂಲದ ಗುರುಬಾಯ್ ಮತ್ತು ಭಾರತ ಬಾಯಿ ಬಂಧಿತರು ಎಂದು ಗುರುತಿಸಲಾಗಿದೆ.

ನಗರದ ಎಚ್‌ಎಸ್‌ಆರ್‌ ಲೇಟ್‌ನ ವೆಂಕಟಪುರದ ವ್ಯಕ್ತಿಯೊಬ್ಬರನ್ನು ವಾಟ್ಸಪ್ ಮುಖಾಂತರ ಆರೋಪಿಗಳು, ಗಣೇಶ ಗ್ರೀನ್ ಭಾರತ್ ಲಿಮಿಟೆಡ್ ಐಪಿಯೊ ಎಂಬ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹಣ ದ್ವಿಗುಣವಾಗಲಿದ್ದು, ಹೆಚ್ಚಿನ ಹಣ ಸಂಪಾದನೆ ಮಾಡಬಹುದೆಂದು ಆಮಿಷವೊಡ್ಡಿ ಹಂತ ಹಂತವಾಗಿ 35.35 ಲಕ್ಷ ರೂ. ಹಣವನ್ನು ವಿವಿಧ ಬ್ಯಾಂಕ್‌ಗಳಿಗೆ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುವ ಬಗ್ಗೆ ಅವರು ದೂರು ನೀಡಿದ್ದರು.

ಈ ಕುರಿತು ತನಿಖೆ ನಡೆಸಿದ ಸಿಇಎನ್ ಠಾಣೆಯ ವಿವಿಧ ಆಯಾಮಗಳಲ್ಲಿ ಹಲವು ಮಾಹಿತಿಗಳನ್ನು ಸಂಗ್ರಹಿಸಲಾಗಿದೆ ದೇಶದ ವಿವಿಧ ರಾಜ್ಯಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿ ಆ ಹಣವನ್ನು ವಿತ್ ಡ್ರಾ ಮಾಡಿದ ಇಬ್ಬರನ್ನು ಹೈದರಾಬಾದ್‌ನಲ್ಲಿ ವಶಕ್ಕೆ ಪಡೆದಿದ್ದಾರೆ. ಆ ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ ಆರೋಪಿ ಸಹೋದರ ದುಬೈನಲ್ಲಿ ವಾಸವಾಗಿದ್ದು, ಆತನು ಮತ್ತು ಆತನ ಸ್ನೇಹಿತ ಈ ಇಬ್ಬರಿಂದ ವಿವಿಧ ಬ್ಯಾಂಕ್‌ಗಳಲ್ಲಿ ದಾಖಲಾಗಿರುವುದು ಬೆಳಕಿಗೆ ಬಂದಿದೆ.

ಈ ರೀತಿ ಸಂದಾಯ ಮಾಡಿದ ಹಣವನ್ನು ಈ ಮೂವರು ವ್ಯಕ್ತಿಗಳ ಮುಖಾಂತರ ವಿತ್ ಡ್ರಾ ಮಾಡಿ ನಂತರ ಹವಾಲ ಮುಖಾಂತರ ದುಬೈನಲ್ಲಿ ಹಣವನ್ನು ಪಡೆದುಕೊಂಡು ತನಿಖೆಯಿಂದ ಬೆಳಕಿಗೆ ಬಂದಿದೆ. ಸದ್ಯ ಮೂವರನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ ಎಂದು ವಿವರಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News