"ಮೊಬೈಲ್ ನೋಡುವ ಸಮಯ ಕಡಿಮೆ ಮಾಡಿ": ಪ್ಯಾರಾಲಿಂಪಿಕ್ ನಲ್ಲಿ ಚಿನ್ನದ ಪದಕ ವಿಜೇತ ನಿತೇಶ್ ಕುಮಾರ್ ಕಿವಿಮಾತು

Update: 2024-10-18 14:50 GMT

ಬೆಂಗಳೂರು: ಪ್ಯಾರಾಲಿಂಪಿಕ್ ಚಿನ್ನದ ಪದಕವನ್ನು ಗೆಲ್ಲುವುದು ದೊಡ್ಡ ಸಾಧನೆಯಾಗಿದ್ದರೂ ಸ್ಫೂರ್ತಿದಾಯಕವಾಗಿ ಬದುಕುವುದು ಅದಕ್ಕಿಂತ ಬಹಳ ಮಹತ್ವದ್ದಾಗಿದೆ ಎಂದು ಪ್ಯಾರಾಲಿಂಪಿಕ್ ನಲ್ಲಿ ಚಿನ್ನದ ಪದಕ ವಿಜೇತ ನಿತೇಶ್ ಕುಮಾರ್ ಬೆಂಗಳೂರಿನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಹೇಳಿದರು.

ನನ್ನ ಬದುಕಿನ ಪ್ರಯಾಣವು ತಮ್ಮ ಆರೋಗ್ಯ ಸಮಸ್ಯೆಗಳನ್ನು ಮೀರಿ ಸಾಧನೆ ಮಾಡುವ ಭರವಸೆಯನ್ನು ಯಾರನ್ನಾದಲೂ ಹುಟ್ಟಿಸಿದರೆ ನನ್ನ ಪ್ರಯತ್ನ ಸಾರ್ಥಕವಾಗುತ್ತದೆ. ಸೈಕ್ಲಿಂಗ್ ಆಗಲಿ, ಜಾಗಿಂಗ್ ಅಥವಾ ವಾಕಿಂಗ್ ಆಗಲಿ ಏನಾದರೂ ಮಾಡಬೇಕು, ಒಟ್ಟಾರೆ ದೈಹಿಕವಾಗಿ ಸಕ್ರಿಯರಾಗಿರಬೇಕು ಎಂದರು. ಮನರಂಜನೆಗಾಗಿ ಯಾವುದೇ ಕ್ರೀಡೆಗಳನ್ನು ಆಡಿ, ಜೊತೆಗೆ ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ಆರೋಗ್ಯಕರ ಆಹಾರ ತಿನ್ನಿರಿ, ಚೆನ್ನಾಗಿ ನಿದ್ದೆ ಮಾಡಿ ಮತ್ತು ಮೊಬೈಲ್ ನೋಡುವ ಸಮಯ ಕಡಿಮೆ ಇರುವಂತೆ ನೋಡಿಕೊಳ್ಳಿ ಎಂದು ಹೇಳಿದರು.

ಆರೋಗ್ಯ ಮತ್ತು ಕ್ಷೇಮ ಕ್ಷೇತ್ರದಲ್ಲಿನ ಜ್ಞಾನ ಉದ್ಯಮವಾಗಿರುವ ಹ್ಯಾಪಿಯೆಸ್ಟ್ ಹೆಲ್ತ್ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಿ ಗೆಲುವು ಸಾಧಿಸಿದ ವ್ಯಕ್ತಿಗಳನ್ನು ಗುರುತಿಸಿ ಗೌರವ ಸಮರ್ಪಿಸುವ ಸಲುವಾಗಿ ‘ಹೆಲ್ತ್ ಚಾಂಪಿಯನ್’ ಯೋಜನೆಯನ್ನು ಆರಂಭಿಸಿದೆ.

ಈ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತರಾಗಿರುವ ನಿತೇಶ್ ಕುಮಾರ್ ಅವರಿಗೆ 2024ರ ಹೆಲ್ತ್ ಚಾಂಪಿಯನ್ ಎಂಬ ಮನ್ನಣೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಹ್ಯಾಪಿಯೆಸ್ಟ್ ಹೆಲ್ತ್‌ ನ ಅಧ್ಯಕ್ಷ ಅಶೋಕ್ ಸೂತ , ಹ್ಯಾಪಿಯೆಸ್ಟ್ ಹೆಲ್ತ್ - ನಾಲೆಡ್ಜ್ ಅಂಡ್ ಡಯಾಗ್ನೋಸ್ಟಿಕ್ಸ್‌ ನ ಸಿಇಓ ಅನಿಂದ್ಯಾ ಚೌಧರಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News