ಬೆಂಗಳೂರು | ಮಿಸ್ಡ್ ಕಾಲ್ ಕೊಟ್ಟು ಹನಿಟ್ರ್ಯಾಪ್ ಆರೋಪ : ಮೂವರ ಬಂಧನ

Update: 2024-08-15 20:54 IST
ಬೆಂಗಳೂರು | ಮಿಸ್ಡ್ ಕಾಲ್ ಕೊಟ್ಟು ಹನಿಟ್ರ್ಯಾಪ್ ಆರೋಪ : ಮೂವರ ಬಂಧನ

ಸಾಂದರ್ಭಿಕ ಚಿತ್ರ (PC:Meta AI)

  • whatsapp icon

ಬೆಂಗಳೂರು: ಮಿಸ್ಡ್ ಕಾಲ್ ಕೊಟ್ಟು ಯುವಕರನ್ನು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಆರೋಪದಡಿ ಮೂವರನ್ನು ಇಲ್ಲಿನ ಸಂಪಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ನಜ್ಮಾ ಕೌಸರ್, ಮೊಹಮ್ಮದ್ ಅತೀಕ್ ಹಾಗೂ ಕರೀಂ ಉಲ್ಲಾ ಎಂಬುವರು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಯುವಕರನ್ನು ಗುರಿಯಾಗಿಸಿಕೊಂಡು ಮಿಸ್ಡ್ ಕಾಲ್ ಕೊಟ್ಟು ಪರಿಚಯಿಸಿಕೊಳ್ಳುತ್ತಿದ್ದ ನಜ್ಮಾ, ನಂತರ ಅವರನ್ನು ಕರೆಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದರು. ನಜ್ಮಾಳಿಗೆ ಮೊಹಮ್ಮದ್ ಅತೀಕ್ ಹಾಗೂ ಕರೀಂ ಉಲ್ಲಾ ಸಾಥ್ ನೀಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಸದ್ಯ ಸಂತ್ರಸ್ತ ಯುವಕ ನೀಡಿದ ದೂರನ್ನು ಆಧರಿಸಿ ಸಂಪಿಗೆಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News