ದಾವಣಗೆರೆ | ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ

ದಾವಣಗೆರೆ : ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ದಾವಣಗೆರೆ ಮುಸ್ಲಿಮ್ ಒಕ್ಕೂಟವು ನಗರದ ಪಿ.ಬಿ.ರಸ್ತೆಯ ಮದೀನಾ ಮಸ್ಟಿದ್ ಮುಂಭಾಗ ಶಾಂತಿಯುತ ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ತಾಹೀರ್ ಸಮೀರ್, ತಿದ್ದುಪಡಿ ಮಸೂದೆ ಮುಸ್ಲಿಮರ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಹಕ್ಕುಗಳನ್ನು ಕಿತ್ತೆಸೆಯುವ ಪ್ರಯತ್ನವಾಗಿದೆ.
ಈ ತಿದ್ದುಪಡಿ ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದೆ. ಇದು ಕೇವಲ ಕಾನೂನು ತಿದ್ದುಪಡಿ ಅಲ್ಲ. ಅಲ್ಪಸಂಖ್ಯಾತರ ಧಾರ್ಮಿಕ ಮತ್ತು ಶೈಕ್ಷಣಿಕ ಸ್ವಾತಂತ್ರ್ಯದ ವಿರುದ್ಧದ ಕದನವಾಗಿದೆ ಎಂದ ಆಕ್ರೋಶ ವ್ಯಕ್ತಪಡಿಸಿದರು.
ತಿದ್ದುಪಡಿ ಮಸೂದೆ ಹಿಂಪಡೆಯುವವರೆಗೆ ಹೋರಾಟ ಮುಂದುವರಿಸುವುದಾಗಿ ಇದೇ ವೇಳೆ ಪ್ರತಿಭಟನಾಕಾರರು ಘೋಷಿಸಿದರು.
ಪ್ರತಿಭಟನೆಯಲ್ಲಿ ದಾವಣಗೆರೆ ಮುಸ್ಲಿಮ್ ಒಕ್ಕೂಟದ ಶೋಯೆಬ್ ಅಹ್ಮದ್, ಸೈಯದ್ ಅಹ್ಮದ್, ಖಮರ್ ಅಲಿ, ಸೈಯದ್ ತಾಹಿರ್, ಗೌಸ್ ಮೊಯಿನುದ್ದೀನ್, ಶಾನವಾಝ್, ನದೀಮ್, ಕಬೀರ್ ಲಾಲ್, ಅಹ್ಮದ್ ಅಲಿ, ರಹೀಂ ಹಾಗೂ ಮತ್ತಿತರರು ಭಾಗವಹಿಸಿದ್ದರು.