ಸಿ.ಟಿ. ರವಿ ಪ್ರಕರಣ ಮುಗಿದ ಅಧ್ಯಾಯ : ಬಸವರಾಜ ಹೊರಟ್ಟಿ

Update: 2024-12-23 16:12 GMT

ಬೆಂಗಳೂರು : ಪರಿಷತ್ ಸದಸ್ಯ ಸಿ.ಟಿ. ರವಿ ಪ್ರಕರಣ ಮುಗಿದ ಅಧ್ಯಾಯ. ಆದರೆ, ನಾನು ಒಳ್ಳೆಯ ಕಾಲದ ಅಂತ್ಯದಲ್ಲಿದ್ದು, ನಿಮಗಾಗಲೀ, ನನಗಾಗಲೀ ಒಳ್ಳೆಯ ಕಾಲ ಬರುವುದಿಲ್ಲ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಾರ್ಮಿಕವಾಗಿ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕರಿಗೆ ಎಷ್ಟೇ ಒಳ್ಳೆಯ ಪಾಠ ಮಾಡಿದರೂ ವರ್ತನೆ ಬದಲಾವಣೆಯಲ್ಲಿ ಯಾವುದೇ ಪ್ರಯೋಜನವಾಗುವುದಿಲ್ಲ. ಭವಿಷ್ಯದಲ್ಲಿ ಒಳ್ಳೆಯ ಕಾಲ ಬರಲ್ಲ. ನಾನು ಕೂಡ ಒಳ್ಳೆಯ ಕಾಲದ ಅಂತ್ಯದಲ್ಲಿದ್ದೇನೆ. ನಿಮಗಾಗಲೀ, ನನಗಾಗಲೀ ಒಳ್ಳೆಯ ಕಾಲ ಬರುವುದಿಲ್ಲ ಎಂದರು.

ನಾನು ಸದನದಲ್ಲಿ ರೂಲಿಂಗ್ ಕೊಟ್ಟಿದ್ದೇನೆ. ಹಾಗಾಗಿ, ಆ ಪ್ರಕರಣ ಚರ್ಚಿಸುವ ಅವಶ್ಯಕತೆ ಬರುವುದಿಲ್ಲ. ಕೆಳ ಮನೆಯ ಬಗ್ಗೆ ನಾನು ಮಾತನಾಡುವುದಿಲ್ಲ ಎಂದ ಅವರು, ಈಗ ಹಕ್ಕುಚ್ಯುತಿ ಬಗ್ಗೆ ಪತ್ರ ಬಂದಿದೆ. ಅದರ ಬಗ್ಗೆ ಏನು ಕ್ರಮ ಆಗಬೇಕೋ ಅದನ್ನು ಮಾಡುತ್ತೇವೆ. ಮಹಿಳಾ ಆಯೋಗದಿಂದ ದೂರು ಬಂದರೆ ಉತ್ತರ ಕೊಡುತ್ತೇನೆ. ಅದು ಅಲ್ಲದೆ, ಅವರು ನನ್ನ ಪ್ರಶ್ನೆ ಮಾಡಲು ಬರುವುದಿಲ್ಲ ಎಂದು ತಿಳಿಸಿದರು.

ಅಂದು ಪೊಲೀಸರು ನನಗೆ ರಾತ್ರಿ 9 ಗಂಟೆಗೆ ಮಾಹಿತಿ ಕೊಟ್ಟಿದ್ದು, ಬಂಧಿಸುವ ಮಾಹಿತಿಯೂ ಇತ್ತು. ಇನ್ನೊಂದೆಡೆ, ವಿಧಾನಪರಿಷತ್ ಸದಸ್ಯರ ಮೇಲೆ ಹಲ್ಲೆಗೆ ಮುಂದಾದವರನ್ನು ಬಂಧಿಸಲು ಸೂಚಿಸಿದ್ದೇನೆ. ವಿಧಾನಪರಿಷತ್ ಮೊಗಸಾಲೆಯಲ್ಲಿ ದಾಳಿ ಮಾಡುತ್ತಾರೆ ಅಂದರೆ ಸರಿಯಲ್ಲ. ಹೀಗಾಗಿ, ಅವರನ್ನು ಬಂಧಿಸಲು ಸೂಚಿಸಿದ್ದೇನೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News