ಶಾಸಕರಿಗೆ ಚಿನ್ನ ಲೇಪಿತ ‘ಗಂಡ ಭೇರುಂಡ ಬ್ಯಾಡ್ಜ್’ ವಿತರಣೆ
Update: 2024-02-21 15:19 GMT
ಬೆಂಗಳೂರು : ಕರ್ನಾಟಕ ರಾಜ್ಯದ ಲಾಂಛನವಾದ ಗಂಡ ಭೇರುಂಡದ ಚಿನ್ನ ಲೇಪಿತ ಬ್ಯಾಡ್ಜ್ ಗಳನ್ನು ವಿಧಾನಸಭೆ ಎಲ್ಲ ಸದಸ್ಯರುಗಳಿಗೆ ವಿತರಿಸಲಾಯಿತು.
ರಾಜ್ಯದ ವಿಧಾನಸಭೆಯ ಶಾಸಕರನ್ನು ಗುರುತಿಸಲು ಗಂಡ ಭೇರುಂಡದ ಲಾಂಛನದ ಈ ಬ್ಯಾಡ್ಜ್ ಗಳನ್ನು ವಿತರಿಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ಹೇಳಿದ್ದಾರೆ.
ರಾಜ್ಯದ ಶಾಸಕರುಗಳು ರಾಜ್ಯದಿಂದ ಹೊರ ಹೋದಾಗ ಗುರುತಿಸಿ ಅವರಿಗೆ ಸಿಗಬೇಕಾದ ಸೂಕ್ತ ಗೌರವಗಳನ್ನು ನೀಡಲು ಈ ಲಾಂಛನ ನೆರವಾಗಲಿದೆ. ಇನ್ನೂ, ರಾಜ್ಯ ಸರಕಾರದ ಲಾಂಛನವಾದ ಗಂಡು ಬೇರುಂಡದ ಸುಮಾರು ಒಂದು-ಒಂದೂವರೆ ಇಂಚಿನಷ್ಟು ಉದ್ದವಿದ್ದು, ಚಿನ್ನಲೇಪಿತ ಬ್ಯಾಡ್ಜ್ ಇದಾಗಿದೆ. ಬ್ಯಾಡ್ಜ್ ನಲ್ಲಿ ಎಂಎಲ್‍ಎ ಎಂಬ ಅಕ್ಷರಗಳನ್ನು ಮುದ್ರಿಸಲಾಗಿದೆ.