ಮಾಹಿತಿಸೌಧಕ್ಕೆ ಡಾ.ಮನಮೋಹನ್ ಸಿಂಗ್ ಹೆಸರಿಡಲು ಒತ್ತಾಯ

Update: 2024-12-29 16:00 GMT

ಡಾ.ಮನಮೋಹನ್ ಸಿಂಗ್

ಬೆಂಗಳೂರು : ನಗರದಲ್ಲಿರುವ ಮಾಹಿತಿಸೌಧದ ಹೆಸರನ್ನು ಡಾ.ಮನಮೋಹನ್ ಸಿಂಗ್ ಮಾಹಿತಿಸೌಧ ಎಂದು ಮರುನಾಮಕರಣ ಮಾಡಬೇಕು ಎಂದು ಎಚ್.ಎಂ.ವೆಂಕಟೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಪ್ರಪಂಚದಲ್ಲಿಯೇ ಬಹು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಕರೆಯಲ್ಪಡುವ ಭಾರತ ದೇಶದ ಪ್ರಧಾನಮಂತ್ರಿಯಾಗಿ 10 ವರ್ಷಗಳ ಕಾಲ ಸತತವಾಗಿ ಆಡಳಿತ ನಡೆಸಿದ ನಮ್ಮ ನೆಚ್ಚಿನ ಆರ್ಥಿಕ ತಜ್ಞ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಈಗ ನಮ್ಮನ್ನು ಅಗಲಿದ್ದಾರೆ. ಅವರು ಈ ದೇಶಕ್ಕೆ ನೀಡಿದ ಕೊಡುಗೆ ಮತ್ತು ಶಾಸನಗಳು/ಯೋಜನೆಗಳು ಹತ್ತು ಹಲವು. ಇದರಲ್ಲಿ ಬಹಳ ಮುಖ್ಯವಾಗಿ ಆಡಳಿತದಲ್ಲಿ ಪಾರದರ್ಶಕತೆಯನ್ನು ತರಲು ಮಾಹಿತಿಯ ಹಕ್ಕು ಅದಿನಿಯಮ 2005 ಜಾರಿಗೊಳಿಸಿದ್ದಾರೆ ಎಂದರು.

ಪ್ರಜಾಪ್ರಭುತ್ವದ ಆಡಳಿತದಲ್ಲಿ ಪಾರದರ್ಶಕತೆಯನ್ನು ತಂದು ಪ್ರತಿಯೊಬ್ಬ ನಾಗರೀಕರು ಆಡಳಿತದಲ್ಲಿನ ಪಾಲುದಾರರಾಗುವಂತೆ ಮತ್ತು ಆಡಳಿತದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆಯುವಂತೆ ಮಾಡಿದ ಮಾಹಿತಿ ಹಕ್ಕು ಕಾಯ್ದೆ 2005ನ್ನು ಉಳಿಸಿ, ಇನ್ನಷ್ಟು ಬಲಪಡಿಸುವ ಗುರುತರ ಜವಾಬ್ದಾರಿ ದೇಶದ ನಾಗರಿಕರ ಮೇಲಿದೆ ಎಂದು ಅವರು ಹೇಳಿದ್ದಾರೆ.

ಆದರೆ ಈ ಕಾಯ್ದೆಗೆ ಹಲವಾರು ತಿದ್ದುಪಡಿಯನ್ನು ತರಲಾಗಿದೆ. ಮೂಲ ಕಾಯ್ದೆಯನ್ನು ಉಳಿಸಿಕೊಳ್ಳುವ ಮತ್ತು ಅದನ್ನು ಸಂಪೂರ್ಣವಾಗಿ ಅನುμÁ್ಠನಕ್ಕೆ ತರುವ ಪ್ರಯತ್ನ ಜನರಿಂದ ಆಯ್ಕೆ ಆದ ಜನಪ್ರತಿನಿಧಿಗಳ ದೊಡ್ಡ ಜವಾಬ್ದಾರಿಯನ್ನು ಡಾ. ಮನಮೋಹನ್ ಸಿಂಗ್ ಈಗ ಬಿಟ್ಟು ಹೋಗಿದ್ದಾರೆ. ಅವರ ಹೆಸರನ್ನು ಕರ್ನಾಟಕದಲ್ಲಿ ಶಾಶ್ವತವಾಗಿ ಉಳಿಸುವ ಮತ್ತು ಅವರ ಕೊಟ್ಟ ಆಡಳಿತವನ್ನು ನೆನಪಿಸಿಕೊಳ್ಳುವ ಗುರುತರ ಜವಾಬ್ದಾರಿ ತಮ್ಮ ಮೇಲೆ ಇದೆ ಎಂದು ನಾವು ಭಾವಿಸಿದ್ದೇವೆ ಎಂದು ಎಚ್.ಎಂ.ವೆಂಕಟೇಶ್ ಹೇಳಿದ್ದಾರೆ.

ಮನಮೋಹನ್ ಸಿಂಗ್ ಅವರ ಹೆಸರನ್ನು ಕರ್ನಾಟಕದಲ್ಲಿ ಶಾಶ್ವತಗೊಳಿಸುವ ಮೊದಲ ಹೆಜ್ಜೆಯಾಗಿ ಅವರ ನೇತೃತ್ವದ ಯುಪಿಎ ಸರಕಾರ ತಂದ ಮಾಹಿತಿ ಹಕ್ಕು ಅದಿನಿಯಮ 2005ರ ನೆನಪಿಗೆ ಬೆಂಗಳೂರಿನ ವಿಕಾಸ ಸೌಧದ ಎದುರು ಇರುವ ಮಾಹಿತಿ ಸೌಧಕ್ಕೆ ‘ಡಾ. ಮನಮೋಹನ್ ಸಿಂಗ್ ಮಾಹಿತಿ ಸೌಧ’ ಎಂದು ಮರುನಾಮಕರಣ ಮಾಡಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ. 

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News