ಕೆಎಸ್ಸಾರ್ಟಿಸಿಗೆ ಅಂತರ್ ರಾಷ್ಟ್ರೀಯ 3 ಬ್ರಾಂಡ್ ಕೌನ್ಸಿಲ್ ರೇಟಿಂಗ್ಸ್ ಪ್ರಶಸ್ತಿ
Update: 2025-03-24 23:49 IST

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಗೆ ಅಶ್ವಮೇಧ ಬ್ರ್ಯಾಂಡ್‍ಗಾಗಿ ವರ್ಷದ ಐಕಾನಿಕ್ ಬ್ರ್ಯಾಂಡ್ ಪ್ರಶಸ್ತಿ, ಸಂಸ್ಥೆಯ ಆರೋಗ್ಯ ಉಪಕ್ರಮಕ್ಕಾಗಿ ವರ್ಷದ ಅತ್ಯುತ್ತಮ ಉಪಕ್ರಮ ಪ್ರಶಸ್ತಿ ಮತ್ತು ಉತ್ತಮ ಕಾರ್ಮಿಕ ಕಲ್ಯಾಣ ಉಪಕ್ರಮಗಳಿಗಾಗಿ, ಉತ್ತಮ ಸಂಸ್ಥೆ ಪ್ರಶಸ್ತಿ ಲಭಿಸಿದೆ.
ಇತ್ತೀಚಿಗೆ ಇಂಡಿಯಾ ಥಾಯ್ ಚೇಂಬರ್ ಆಫ್ ಕಾಮರ್ಸ್, ಬ್ಯಾಂಕಾಕ್, ಥೈಲ್ಯಾಂಡ್ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಿಗಮಕ್ಕೆ ಪ್ರಶಸ್ತಿ ಪ್ರಧಾನ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.