ದಿಲ್ಲಿ ಹೈಕೋರ್ಟ್ ಜಡ್ಜ್ ನಿವಾಸದಲ್ಲಿ ನಗದು ಪತ್ತೆ ಪ್ರಕರಣ | ವಕೀಲರ ಸಂಘದಿಂದ ಹಲವು ನಿರ್ಣಯ ಅಂಗೀಕಾರ

Update: 2025-03-26 00:25 IST
ದಿಲ್ಲಿ ಹೈಕೋರ್ಟ್ ಜಡ್ಜ್ ನಿವಾಸದಲ್ಲಿ ನಗದು ಪತ್ತೆ ಪ್ರಕರಣ | ವಕೀಲರ ಸಂಘದಿಂದ ಹಲವು ನಿರ್ಣಯ ಅಂಗೀಕಾರ

ಸಾಂದರ್ಭಿಕ ಚಿತ್ರ

  • whatsapp icon

ಬೆಂಗಳೂರು : ದಿಲ್ಲಿ ಹೈಕೋರ್ಟ್ ಜಡ್ಜ್ ನಿವಾಸದಲ್ಲಿ ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಕೀಲರ ಸಂಘದಿಂದ ಹಲವು ನಿರ್ಣಯ ಅಂಗೀಕರಿಸಿದೆ.

ದಿಲ್ಲಿ ಹೈಕೋರ್ಟ್‌ನ ಆರೋಪಿತ ಜಡ್ಜ್ ಮೇಲೆ ಎಫ್‌ಐಆರ್ ದಾಖಲಿಸಬೇಕು. ತನಿಖೆ ಮುಗಿಯುವವರೆಗೆ ಯಾವುದೇ ಕೆಲಸ ನೀಡಬಾರದು. ಎಲ್ಲ ಜಡ್ಜ್ ಗಳು, ಅವರ ಕುಟುಂಬದವರು ಆಸ್ತಿವಿವರ ಘೋಷಿಸಬೇಕು. ಜಡ್ಜ್‌ಗಳ ಆಸ್ತಿವಿವರವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು.ಹೈಕೋರ್ಟ್ ನ್ಯಾ.ಕೆ.ನಟರಾಜನ್ ಅವರು Part Heard ಕೇಸ್‌ಗಳ ವಿಚಾರಣೆ ಕೈಬಿಡಬೇಕು.ಇಲ್ಲವಾದರೆ ಅವರ ಕೋರ್ಟ್ ಹಾಲ್ ಬಹಿಷ್ಕರಿಸುವುದಾಗಿ ವಕೀಲರ ಸಂಘ ಎಚ್ಚರಿಕೆ ನೀಡಿದೆ.

ಜಡ್ಜ್‌ಗಳ ಮೇಲೆ ಆರೋಪ ಬಂದಾಗ ಬೇರೆ ಹೈಕೋರ್ಟ್‌ಗೆ ವರ್ಗಾಯಿಸಬೇಕು. ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಖಂಡಿಸಿ ಕ್ಯಾಂಡಲ್ ಲೈಟ್ ಪ್ರತಿಭಟನೆಗೆ ವಕೀಲರ ಸಂಘ ನಿರ್ಧಾರ ಮಾಡಿದೆ. ಕರ್ನಾಟಕ ಹೈಕೋರ್ಟ್‌ನ ವಿಜಿಲೆನ್ಸ್ ವಿಭಾಗವನ್ನು ಬಲಪಡಿಸಬೇಕು. ನ್ಯಾಯಾಂಗದ ಭ್ರಷ್ಟಾಚಾರದ ದೂರು ಸ್ವೀಕರಿಸಲು ವ್ಯವಸ್ಥೆ ರೂಪಿಸಬೇಕು. ಜಡ್ಜ್‌ಗಳ ಹನಿಟ್ರ್ಯಾಪ್ ಬಗ್ಗೆ ಸದನದಲ್ಲಾದ ಪ್ರಸ್ತಾಪದ ಬಗ್ಗೆ ಸತ್ಯಾಸತ್ಯತೆ ಪರಿಶೀಲಿಸಬೇಕು ಎಂದು ತಿಳಿಸಿದೆ.

ಕರ್ನಾಟಕ ನ್ಯಾಯಾಂಗದ ಆಡಳಿತದಲ್ಲಿ ಉತ್ತರದಾಯಿತ್ವ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಕರ್ನಾಟಕ ಹೈಕೋರ್ಟ್ ಕೊಲಿಜಿಯಮ್‌ನಲ್ಲಿ ಇಲ್ಲಿನ ನ್ಯಾಯಮೂರ್ತಿಗಳಿರಬೇಕು. ನ್ಯಾಯಾಧೀಶರ ನೇಮಕ, ಕೊಲಿಜಿಯಮ್ ವ್ಯವಸ್ಥೆಯಲ್ಲಿ ಸುಧಾರಣೆಗೆ ಆಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News