ಬಿಎಂಟಿಸಿ ಬಸ್ ಢಿಕ್ಕಿಯಿಂದ ಇಬ್ಬರು ಮೃತ್ಯು: ಗುರುತು ಪತ್ತೆಗೆ ಪೊಲೀಸರ ಕಾರ್ಯಾಚರಣೆ
Update: 2025-03-27 21:47 IST

ಸಾಂದರ್ಭಿಕ ಚಿತ್ರ
ಬೆಂಗಳೂ: ಬಿಎಂಟಿಸಿ ಬಸ್ ಢಿಕ್ಕಿಯಾಗಿ ಸಾವನ್ನಪ್ಪಿದ ದ್ವಿಚಕ್ರ ವಾಹನ ಸವಾರರ ಪೈಕಿ ಓರ್ವನ ಗುರುತು ಪತ್ತೆಗೆ ಇಲ್ಲಿನ ಜೀವನ್‍ಭೀಮಾ ನಗರ ಸಂಚಾರ ಠಾಣಾ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಮೃತ ಓರ್ವನನ್ನು ಅಸ್ಸಾಂನ ತಪಾಸ್ ದಾಲಿ (35) ಎಂದು ಪೊಲೀಸರು ಗುರುತಿಸಿದ್ದಾರೆ. ಘಟನೆಯಲ್ಲಿ ಮತ್ತೋರ್ವ ಸವಾರನ ಮೊಬೈಲ್ ಫೋನ್ ಸಂಪೂರ್ಣ ಹಾನಿಯಾಗಿದ್ದು, ಗುರುತು ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಬಿಎಂಟಿಸಿ ಬಸ್ ಚಾಲಕ ಮಹೇಶ್ ಎಂಬಾತನನ್ನು ಜೀವನ್ ಭೀಮಾ ನಗರ ಸಂಚಾರ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಿ.ವಿ.ರಾಮನ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಎಂಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ತಡರಾತ್ರಿ ಹಳೇ ವಿಮಾನ ನಿಲ್ದಾಣದ ರಸ್ತೆಯ ಇಸ್ರೋ ಕೇಂದ್ರದ ಸಮೀಪ ನಡೆದಿತ್ತು.