ಪಿಯುಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ : ಜಿಲಾನಿ ಮೊಕಾಶಿ

Update: 2025-03-29 23:03 IST
ಪಿಯುಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ : ಜಿಲಾನಿ ಮೊಕಾಶಿ
  • whatsapp icon

ಬೆಂಗಳೂರು : ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಪರೀಕ್ಷೆಗಳಿಗೆ ತಯಾರು ಮಾಡಲು ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕ ಜಿಲಾನಿ ಮೊಕಾಶಿ ತಿಳಿಸಿದ್ದಾರೆ.

ವರ್ಷ ಪೂರ್ತಿ ರಾಜ್ಯದ ಎಲ್ಲೆಡೆ ನಿರಂತರ ತರಬೇತಿ ನೀಡಿ ಹಲವು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆದು ವಿಜ್ಞಾನ ವಿಭಾಗದ 100 ಅರ್ಹ ವಿದ್ಯಾರ್ಥಿಗಳಿಗೆ ಇದೀಗ ಬೆಂಗಳೂರಿನ ಬಾಣಸವಾಡಿಯ ಫಿಸಿಕ್ಸ್ ವಾಲಾ ವಿದ್ಯಾಪೀಠದಲ್ಲಿ 40 ದಿನಗಳ ವಸತಿ ಸಹಿತ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಅದೇ ರೀತಿ ವಾಣಿಜ್ಯ ವಿಭಾಗದ 50 ವಿದ್ಯಾರ್ಥಿಗಳಿಗೆ ಮೈಸೂರಿನ ಅವಂತಿ ಕ್ಲಾಸಸ್ ಸಂಸ್ಥೆ ವತಿಯಿಂದ 60 ದಿನಗಳ ವಿಶೇಷ ತರಬೇತಿ ನೀಡಲಾಗುತ್ತಿದೆ. 2024-25ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ 8500 ವಿದ್ಯಾರ್ಥಿಗಳಿಗೆ ಆಯ್ದ 18 ವಸತಿ ಶಾಲೆ /ಕಾಲೇಜುಗಳಲ್ಲಿ ಪ್ರಸ್ತುತ ಆಫ್ ಲೈನ್ ತರಬೇತಿ ನೀಡಲಾಗುತ್ತಿದೆ ಎಂದು ಜಿಲಾಲಿ ಮೊಕಾಶಿ ಹೇಳಿದ್ದಾರೆ.

2025-26ನೇ ಸಾಲಿನಲ್ಲಿ ಜೂನ್ ತಿಂಗಳಿನಿಂದ ಮುಂದಿನ ವರ್ಷ ಫೆಬ್ರವರಿ ವರೆಗೆ ಆನ್ ಲೈನ್ ತರಬೇತಿ ನೀಡಲಾಗುವುದು. ಇದರಿಂದ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಪರೀಕ್ಷೆ ಎದುರಿಸಲು ಸಹಕಾರಿಯಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News