ಚಿಕ್ಕಮಗಳೂರು | ಹೇಮಾವತಿ ನದಿಗೆ ವಿಷ ಹಾಕಿರುವ ಶಂಕೆ: ಮೀನುಗಳ ಮಾರಣ ಹೋಮ
Update: 2025-03-27 23:36 IST

ಚಿಕ್ಕಮಗಳೂರು : ಹೇಮಾವತಿ ನದಿ ನೀರಿನಲ್ಲಿ ಸಾವಿರಾರು ಮೀನುಗಳ ಮಾರಣ ಹೋಮ ನಡೆದಿದ್ದು, ಮೀನು ಮಾರಾಟ ಮಾಡುವ ಉದ್ದೇಶದಿಂದ ಕಿಡಿಗೇಡಿಗಳು ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ.
ಮೂಡಿಗೆರೆ ತಾಲೂಕು ಬಣಕಲ್ ಸಮೀಪ ಹರಿಯುವ ಹೇಮಾವತಿ ನದಿ ನೀರಿಗೆ ಮೈಲುತುತ್ತ ಬೇರೆಸಿರುವ ಪರಿಣಾಮ ಮೀನುಗಳ ಮಾರಾಣ ಹೋಮ ನಡೆದಿದ್ದು, ಮೀನು ಮಾರಾಟ ಮಾಡುವ ಉದ್ದೇಶದಿಂದ ಕೃತ್ಯ ನಡೆಸಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದು, ಎರಡು ಕಿ.ಮೀ.ವರೆಗೂ ಮೀನುಗಳು ಸತ್ತು ಬಿದ್ದಿವೆ.
ಹೇಮಾವತಿ ನದಿ ನೀರು ಹಾಸನ ಜಿಲ್ಲೆ ಗೊರೂರು ಡ್ಯಾಮ್ ಸೇರುತ್ತಿದ್ದು, ನದಿ ಹರಿಯುವ ಮಾರ್ಗದಲ್ಲಿನ ನೂರಾರು ಹಳ್ಳಿಗಳ ಜನರು ಈ ನೀರನ್ನು ಕುಡಿಯಲು ಉಪಯೋಗಿಸುತ್ತಾರೆ. ವಿಷ ಹಾಕಿರುವುದರಿಂದ ನೀರು ಕಲುಷಿತಗೊಂಡಿದ್ದು, ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.