ಭಾರತೀಯರನ್ನು ಒಡೆದು ಛಿದ್ರಗೊಳಿಸಿದ್ದು ‘ಮನುಸ್ಮೃತಿ’ : ಶೇಖರ್ ಆರ್.

Update: 2024-12-25 17:04 GMT

ಬೆಂಗಳೂರು : ‘ಆರ್ಯರು ರೂಪಿಸಿರುವ ಮನುಧರ್ಮದ ‘ಮನುಸ್ಮೃತಿ’ ಗ್ರಂಥವು ಭಾರತೀಯರನ್ನು ಒಗ್ಗೂಡಿಸುವ ಬದಲಿಗೆ ಜಾತಿ, ಧರ್ಮ ಅಸಮಾನತೆಯ ಹೆಸರಿನಲ್ಲಿ ಒಡೆದು ಛಿದ್ರಗೊಳಿಸಿದೆ’ ಎಂದು ಬಹುಜನ ಮಹಾಸಭಾ ಸಂಘಟನೆಯ ರಾಜ್ಯಾಧ್ಯಕ್ಷ ಶೇಖರ್ ಆರ್. ಹೇಳಿದ್ದಾರೆ.

ಬುಧವಾರ ಜಯನಗರದ ತಿಲಕ್ ನಗರದಲ್ಲಿ ಬಹುಜನ ಮಹಾಸಭಾ ಸಂಘಟನೆಯಿಂದ ‘ಮನುಸ್ಮೃತಿ’ಯನ್ನು ದಹನ ಮಾಡಿ ಮಾತನಾಡಿದ ಅವರು, ದೇಶದಲ್ಲಿ ಶೋಷಿತ ವರ್ಗಗಳ ಸಮುದಾಯದ ಜನರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಜೀವನದುದ್ದಕ್ಕೂ ಹೋರಾಡಿದವರು ಡಾ.ಅಂಬೇಡ್ಕರ್ ಎಂದು ನುಡಿದರು.

ಮನುಸ್ಮೃತಿಯು ಜನರನ್ನು ಶ್ರೇಣಿಕೃತವಾಗಿ ವಿಗಂಡಿಸಿ, ಅಸಮಾನತೆಗೆ ದಾರಿ ತೋರಿದೆ. ಶತ ಶತಮಾನಗಳಿಂದಲೂ ದಲಿತರನ್ನು ಗುರಿಯಾಗಿಸಿಕೊಂಡು ಗುಲಾಮಗಿರಿಯಲ್ಲಿಟ್ಟುಕೊಳ್ಳುವಂತೆ ಮಾಡಿದ್ದ ಮನುಸ್ಮೃತಿಯನ್ನು ಅಂಬೇಡ್ಕರ್ ತಮ್ಮ ಅಧ್ಯಯನದ ಮೂಲಕ ಅದರ ಅಂತರಂಗವನ್ನು ಅರಿತು, ಜನರಿಗೆ ಅರಿವು ಮೂಡಿಸಿ, ಮನುಸ್ಮೃತಿಯನ್ನು ಬಹಿರಂಗವಾಗಿ ಸುಟ್ಟ ಮಹಾನಾಯಕ. ದೇಶದಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಗಳು ಮತ್ತು ಅಲ್ಪಸಂಖ್ಯಾತರು ಜಾಗೃತರಾಗಬೇಕು ಎಂದು ಶೇಖರ್ ಕರೆ ನೀಡಿದರು.

ಈ ವೇಳೆಯಲ್ಲಿ ದಸಂಸ ಸುರೇಶ್, ಡಿಎಚ್‍ಡಿಡಿ ಸಂಘಟನೆಯ ರಾಜೇಶ್, ರಮೇಶ್, ಬೀದಿಬದಿ ವ್ಯಾಪಾರ ಸಂಘದ ಅಧ್ಯಕ್ಷ ಕುಪ್ಪೇಸ್ವಾಮಿ, ಹೋರಾಟಗಾರರಾದ ಕೆ.ಶ್ರೀನಿವಾಸ್, ಎಂ.ರಘು ಸೇರಿದಂತೆ ಹಲವರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News