ನೀಟ್ ಫಲಿತಾಂಶ: ದೇಶಕ್ಕೆ ಅಗ್ರಸ್ಥಾನ ಗಳಿಸಿರುವ 67 ವಿದ್ಯಾರ್ಥಿಗಳಲ್ಲಿ ಮೂವರು ಕನ್ನಡಿಗರು

Update: 2024-06-05 04:30 GMT

ಬೆಂಗಳೂರು, ಜೂ.5: ನೀಟ್ (ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಫಲಿತಾಂಶ ಪ್ರಕಟವಾಗಿದ್ದು, 720ಕ್ಕೆ 720 ಅಂಕಗಳನ್ನು ಗಳಿಸಿ ದೇಶದಲ್ಲೇ ಅಗ್ರಸ್ಥಾನ ಪಡೆದ ಸಾಧಕರಲ್ಲಿ ಕರ್ನಾಟಕದ ಮೂವರು ವಿದ್ಯಾರ್ಥಿಗಳೂ ಸೇರಿದ್ದಾರೆ.

ಮಂಗಳೂರು ಎಕ್ಸ್ ಪರ್ಟ್ ಕಾಲೇಜಿನ ಅರ್ಜುನ್ ಕಿಶೋರ್, ಬೆಂಗಳೂರಿನ ನಾರಾಯಣ ಕಾಲೇಜಿನ ವಿದ್ಯಾರ್ಥಿ ಸ್ಯಾಮ್ ಶ್ರೇಯಸ್ ಜೋಸೆಫ್ ಮತ್ತು ಚೈತನ್ಯ ಶಿಕ್ಷಣ ಸಂಸ್ಥೆಯ ಕಲ್ಯಾಣ್ ವಿ. (99.99 ಪರ್ಸೆಂಟೈಲ್) ಗಳಿಸಿದ್ದಾರೆ.

ಕಲ್ಯಾಣ್ ಪಶು ವೈದ್ಯಕೀಯ ವಿಜ್ಞಾನ, ಬಿ ಫಾರ್ಮಾ, ಡಿ ಫಾರ್ಮಾ ಮತ್ತು ಬಿಎಸ್ಸಿ ನರ್ಸಿಂಗ್ ನಲ್ಲಿ ಮೊದಲ ರ‍್ಯಾಂಕ್ ಗಳಿಸಿದ್ದಾರೆ. ಇವರು ಸಿಇಟಿಯಲ್ಲೂ ಅಗ್ರಸ್ಥಾನ ಪಡೆದಿದ್ದರು.

ಮೈಸೂರು ಮೂಲದ ಅರ್ಜುನ್ ವಳಚ್ಚಿಲ್ ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿ. ಅರ್ಜುನ್ ಹೆತ್ತವರು ವೈದ್ಯರಾಗಿದ್ದಾರೆ.

ದೇಶದಲ್ಲಿ 14 ವಿದ್ಯಾರ್ಥಿನಿಯರ ಸಹಿತ ಒಟ್ಟು 67 ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾರೆ. ರಾಜ್ಯದ ಆರು ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದ 100ರ ಒಳಗಿನ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಕರ್ನಾಟಕದ 1,50,171 ವಿದ್ಯಾರ್ಥಿಗಳು ನೀಟ್ ಬರೆದಿದ್ದರು. ಅವರಲ್ಲಿ 89,088 ಅಭ್ಯರ್ಥಿಗಳು ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ ಎಂದು ಎನ್ ಟಿಎ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News