“ಪ್ಯಾರಸಿಟಮಾಲ್”ಗೆ ಬರ | ವಾರ್ತಾಭಾರತಿ ವಿಶೇಷ ವರದಿಗೆ ಸ್ಪಷ್ಟನೆ ನೀಡಿದ ಕೆಎಸ್‍ಎಂಎಸ್‍ಸಿಎಲ್..!

Update: 2024-07-04 13:42 GMT

ಸಾಂದರ್ಭಿಕ ಚಿತ್ರ (PC : Meta AI)

ಬೆಂಗಳೂರು : ಡೆಂಗಿ ಜ್ವರ ಅಬ್ಬರ ನಡುವೆ ಪ್ಯಾರಸಿಟಮಾಲ್‍ಗೆ ಬರ ಶಿರ್ಷಿಕೆಯಡಿ ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿಗೆ ಕರ್ನಾಟಕ ರಾಜ್ಯ ವೈದ್ಯಕಿಯ ಸರಬರಾಜು ನಿಗಮ(ಕೆಎಸ್‍ಎಂಎಸ್‍ಸಿಎಲ್) ಸ್ಪಷ್ಟನೆ ನೀಡಿದ್ದು, ಚಿಕಿತ್ಸೆಗೆ ಅಗತ್ಯ ತಕ್ಕಂತೆ ಪ್ಯಾರಸಿಟಮಾಲ್ ಇದೆ ಎಂದು ತಿಳಿಸಿದೆ.

ಈ ಕುರಿತು ಸ್ಪಷ್ಟೀಕರಣ ನೀಡಿದ್ದು, ಪ್ಯಾರಸಿಟಮಾಲ್ ಔಷಧಕ್ಕೆ ಸಂಬಂಧಿಸಿದಂತೆ, 2023-24ನೆ ಸಾಲಿನಲ್ಲಿ ಆರೋಗ್ಯ ಸಂಸ್ಥೆಗಳಿಂದ ಪ್ಯಾರಸಿಟಮಾಲ್-650ಎಂಜಿ 8,72,20,400, ಔಷಧವು ಸರಬರಾಜು ಆಗಿ ಎಲ್ಲ ಔಷಧ ಉಗ್ರಾಣಗಳಲ್ಲಿ 3.7 ಕೋಟಿ ಮಾತ್ರೆಗಳು ಲಭ್ಯವಿದೆ. ಜತೆಗೆ, ಮಕ್ಕಳಿಗೆ ನೀಡಬಹುದಾದ ಪ್ಯಾರಸಿಟಮಾಲ್ ಸಿರಪ್ ಮತ್ತು ಡ್ರಾಪ್ಸ್ ಔಷಧಗಳು ಅಗತ್ಯಕ್ಕೆ ಬೇಕಾದಷ್ಟು ದಾಸ್ತಾನು ಇಡಲಾಗಿದೆ ಎಂದು ತಿಳಿಸಿದೆ.

ಇನ್ನೂ, ಡೆಂಗಿ ಚಿಕಿತ್ಸೆ ಮತ್ತು ನಿರ್ವಹಣೆಗಾಗಿ ಸಾಮಾನ್ಯವಾಗಿ ಬಳಸುವ ಎಲ್ಲ ಮಾದರಿಯ ಔಷಧಗಳು ಮತ್ತು ಡೆಂಗಿ ಪರೀಕ್ಷೆಗೆ ಬೇಕಾಗುವ ಕಿಟ್‍ಗಳನ್ನು ಎಲ್ಲ ಜಿಲ್ಲಾ ಔಷಧ ಉಗ್ರಾಣದ ದಾಸ್ತಾನಿನಲ್ಲಿ ಲಭ್ಯವಿರುವಂತೆ ಕ್ರಮಕೈಗೊಳ್ಳಲಾಗಿದೆ. ಅದೇ ರೀತಿ, ಪ್ಯಾರಸಿಟಮಾಲ್ 500 ಎಂಜಿ ಸಹ ಖರೀದಿ ಪ್ರಕ್ರಿಯೆಯಲ್ಲಿದ್ದು, ನಿರೀಕ್ಷಣಾ ಸರಬರಾಜು ಹಂತದಲ್ಲಿದೆ.ಈ ದಾಸ್ತಾನನ್ನು ಸಹ ಕೂಡಲೇ ಪಡೆಯುವಂತೆ ಕ್ರಮವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದೆ.

ಯಾವುದೇ ಔಷಧ ಉಗ್ರಾಣದಲ್ಲಿ ಹೆಚ್ಚುವರಿ ಔಷಧಗಳ ಬಳಕೆ ಕಂಡುಬಂದಲ್ಲಿ ಅಥವಾ ಔಷಧಗಳ ಕೊರತೆ ಉಂಟಾದಲ್ಲಿ ಕೂಡಲೇ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿರುವ ಉಗ್ರಾಣದಿಂದ ಅಂತರಕ್ಕೆ ವರ್ಗಾವಣೆ ಮೂಲಕ ಔಷಧ ದಾಸ್ತಾನು ಇರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

ದಾಸ್ತಾನು ಕುರಿತ ಮಾಹಿತಿ

► ಪ್ಯಾರಸಿಟಮಾಲ್ 650 ಎಂಜಿ-3,69,37,600 ಮಾತ್ರೆಗಳು

► ಪ್ಯಾರಸಿಟಮಾಲ್ 250ಎಂಜಿ/5ಎಂಎಲ್-5,76,607

► ಪ್ಯಾರಸಿಟಮಾಲ್ 250ಎಂಜಿ/5ಎಂಎಲ್ ಸಿರಪ್-27,28,682

► ಪ್ಯಾರಸಿಟಮಾಲ್ ಡ್ರಾಪ್ಸ್-2,60,965

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News