ಪ್ರೆಸ್‍ಕ್ಲಬ್ ಚುನಾವಣೆ-2024 | ಅಧ್ಯಕ್ಷರಾಗಿ ಶ್ರೀಧರ್, ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ್ ಬೆಳ್ಳಿತಟ್ಟೆ ಆಯ್ಕೆ

Update: 2024-07-07 16:26 GMT

ಬೆಂಗಳೂರು : ಬೆಂಗಳೂರು ಪ್ರೆಸ್‍ಕ್ಲಬ್‍ನ 2024-25ನೆ ಸಾಲಿನ ಕಾರ್ಯಕಾರಿ ಸಮಿತಿಗೆ ರವಿವಾರ ನಡೆದ ಚುನಾವಣೆಯಲ್ಲಿ ಆರ್.ಶ್ರೀಧರ್ ಅವರು ಎರಡನೆ ಬಾರಿಗೆ ಅಧ್ಯಕ್ಷರಾಗಿದ್ದು, ನೂತನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಶಿವಕುಮಾರ್ ಬೆಳ್ಳಿತಟ್ಟೆ ಅವರು ಆಯ್ಕೆಯಾಗಿದ್ದಾರೆ.

ಒಟ್ಟು 1,040 ಮತಗಳ ಪೈಕಿ 767 ಮತಗಳು ಚಲಾವಣೆಯಾಗಿದ್ದು, ಅಧ್ಯಕ್ಷ ಶ್ರೀಧರ್ ಆರ್.-404 ಮತಗಳು ಪಡೆದರು. ಉಪಾಧ್ಯಕ್ಷ ವಿ.ಎನ್.ಮೋಹನ್ ಕುಮಾರ್-417, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ-336, ಖಜಾಂಚಿ ಜಿ.ಗಣೇಶ್-556, ಕಾರ್ಯದರ್ಶಿ-ಜಿ.ವೈ.ಮಂಜುನಾಥ್-288, ಜಂಟಿ ಕಾರ್ಯದರ್ಶಿ ಬಿ.ಎನ್.ಧರಣೀಶ್ 195, ಮಹಿಳಾ ಸ್ಥಾನ- ಮಿನಿ ತೇಜಸ್ವಿ ಮತಗಳು-491 ಮತಗಳನ್ನು ಪಡೆದರು.

ಅದೇ ರೀತಿ, ಸಮಿತಿ ಸದಸ್ಯರಾಗಿ ಶಿವಣ್ಣ-234, ಶರಣಬಸಪ್ಪ-258, ಯಾಸೀರ್ ಮುಸ್ತಾಕ್-259, ಎಂ.ಅಲೀಂ-272, ರೋಹಿಣಿ ಅಡಿಗ-306, ಮಂಜುನಾಥ್-281 ಮತಗಳನ್ನು ಪಡೆದರು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News