ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರ ಆಯ್ಕೆಗೆ ಸಲಹಾ ಸಮಿತಿ ರಚನೆ

Update: 2024-10-05 13:30 GMT

ಬೆಂಗಳೂರು : ರಾಜ್ಯ ಸರಕಾರವು ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲು ಆಯ್ಕೆ ಸಲಹಾ ಸಮಿತಿಯನ್ನು ರಚಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿನ ಸಮಿತಿಯಲ್ಲಿ ನಟ ರವಿಚಂದ್ರನ್, ಹಂಸಲೇಖ ಸೇರಿ ಒಟ್ಟು 49 ಸದಸ್ಯರಿದ್ದಾರೆ.

ಡಾ. ಸಿ.ಎಸ್. ದ್ವಾರಕನಾಥ್, ರವಿಕುಮಾರ್, ಸದಾಶಿವ ಮರ್ಜಿ, ಬಾಬು ಭಂಡಾರಿಗಲ್, ಶೈಲಜಾ ಹಿರೇಮಠ, ರಂಜಾನ್ ದರ್ಗಾ, ವೈ.ಸಿ. ಭಾನುಮತಿ, ಪ್ರೊ.ಜಿ. ಶರಣಪ್ಪ, ಪ್ರೊ. ದೊಣ್ಣೆಗೌಡರು ವೆಂಕಣ್ಣ, ಹಿರೇಮಗಳೂರು ಕಣ್ಣನ್, ಪುಷ್ಪ ಶಿವಕುಮಾರ, ಡಾ. ರತ್ನಮ್ಮ, ಶರಣಪ್ಪ ವಡಿಗೇರಿ, ಡಾ. ತಿಮ್ಮಪ್ಪ, ಕ್ಯಾಪ್ಟನ್ ಕೃಷ್ಣಮೂರ್ತಿ ಸಮಿತಿಯ ಸದಸ್ಯರಾಗಿದ್ದಾರೆ.

ಪಂ.ಎಂ. ವೆಂಕಟೇಶ್ ಕುಮಾರ್, ಡಾ. ಕೆ. ಕುಮಾರ್, ಸಿ. ಬಸವಲಿಂಗಯ್ಯ, ಪಿ.ತಿಪ್ಪೆಸ್ವಾಮಿ, ಶ್ರೀರಾಮ ಇಟ್ಟಣ್ಣನವರ, ಸಿಹಿ ಕಹಿ ಚಂದ್ರು, ಜಯಣ್ಣಚಾರ್ ಮಲ್ಲಿಕಾರ್ಜುನ ಹೊಸಪಾಳ್ಯ, ಎಚ್.ಕೆ. ಶ್ರೀಕಂಠ, ಸಿ.ಚಂದ್ರಶೇಖರ್, ಹಂಸಲೇಖ, ರವಿಚಂದ್ರನ್, ಪ್ರೊ.ರಾಧಕೃಷ್ಣ, ಪ್ರೊ. ಕೃಷ್ಣೆಗೌಡ, ಸಿದ್ದರಾಜು, ನಾಗೇಶ್ ಹೆಗಡೆ, ಕೆ. ಚನ್ನಪ್ಪ, ಎ.ಬಿ. ಸುಬ್ಬಯ್ಯ, ಜೋಸೆಫ್ ಹೂವರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರಕಾರದ ಕಾರ್ಯದರ್ಶಿಗಳು ಸಮಿತಿಯ ಸದಸ್ಯರಾಗಿದ್ದಾರೆ.

ಇಲಾಖೆಯ ಅಡಿಯಲ್ಲಿ ಬರುವ ವಿವಿಧ ಅಕಾಡೆಮಿಗಳ ಅಧ್ಯಕ್ಷರನ್ನು ಸಮಿತಿಯ ಪದನಿಮಿತ್ತ ಸದಸ್ಯರನ್ನಾಗಿ ನೇಮಿಸಿದ್ದು, ಇಲಾಖೆಯ ನಿರ್ದೇಶಕರು ಸಮಿತಿಗೆ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

69ನೇ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿಯೂ ಸಾಧಕರ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲು ಸೇವಾ ಸಿಂಧು ಪೋರ್ಟಲ್‍ನ ಮೂಲಕ ಅರ್ಜಿ ಸಲ್ಲಿಸಲು ಸೆ.30ರವರೆಗೆ ಅವಕಾಶ ನೀಡಲಾಗಿತ್ತು. ಇದುವರೆಗೆ ಸುಮಾರು 1700ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.

 

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News