ತಳ್ಳುಗಾಡಿಗಳಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ವ್ಯಾಪಾರಿಗಳ ನೊಂದಣಿ ಕಡ್ಡಾಯ

Update: 2024-10-05 16:33 GMT

ಬೆಂಗಳೂರು: ತಳ್ಳುಗಾಡಿಗಳಲ್ಲಿ ಪ್ಯಾಕ್ ಮಾಡಿದ ಅಥವಾ ಸಿದ್ಧಪಡಿಸಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ವ್ಯಾಪಾರಿಗಳೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ನೊಂದಣಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

ಶನಿವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, ವರ್ಷಕ್ಕೆ 100ರೂ.ಗಳ ಶುಲ್ಕದಂತೆ ಆಹಾರ ಉದ್ದಿಮೆದಾರರ ನೊಂದಣಿಯನ್ನು 1 ರಿಂದ 5ವರ್ಷಗಳ ಅವಧಿಗೆ ನೊಂದಣಿ ಮಾಡಲಾಗುತ್ತಿತ್ತು. ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ನಿರ್ದೇಶಕ ಹೊರಡಿಸಿರುವ ಆದೇಶದಂತೆ ಸೆ.28ರಿಂದ ವ್ಯಾಪಾರಿಗಳಿಗೆ ನೊಂದಣಿಗಾಗಿ ವಿಧಿಸಲಾಗುತ್ತಿದ್ದ ವರ್ಷಕ್ಕೆ 100ರೂ.ಗಳ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದ್ದು, ವ್ಯಾಪಾರಿಗಳು ಒಮ್ಮೆಗೆ 5 ವರ್ಷಗಳ ಅವಧಿಗೆ ನೊಂದಣಿ ಪಡೆಯಲು ಅವಕಾಶ ಮಾಡಿಕೊಡಲಾಗಿರುತ್ತದೆ.

ತಳ್ಳುಗಾಡಿಗಳಲ್ಲಿ ಪ್ಯಾಕ್ ಮಾಡಿದ ಅಥವಾ ಸಿದ್ಧಪಡಿಸಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಹಾಗೂ ಸಂಬಂಧಪಟ್ಟ ವರ್ಗದ ಎಲ್ಲ ವ್ಯಾಪಾರಿಗಳು ಯಾವುದೆ ಶುಲ್ಕವಿಲ್ಲದೆ ನೊಂದಣಿಯನ್ನು ಮಾಡಿಸಿಕೊಳ್ಳುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News