ಸ್ವಾಭಿಮಾನಿ ಸಮಾವೇಶದ ಹೆಸರಿನ ಸಿದ್ದರಾಮೋತ್ಸವ ಭಾಗ-2 ಫ್ಲಾಪ್ : ಆರ್.ಅಶೋಕ್ ವ್ಯಂಗ್ಯ

Update: 2024-12-03 14:20 GMT

ಬೆಂಗಳೂರು: ಸ್ವಾಭಿಮಾನಿ ಸಮಾವೇಶದ ಹೆಸರಿನಲ್ಲಿ ಹಾಸನದಲ್ಲಿ ಡಿ.5ರಂದು ಸಿದ್ದರಾಮೋತ್ಸವ ಭಾಗ-2 ಬೃಹತ್‌ ನಾಟಕವಾಡಲು ಹೊರಟಿದ್ದ ಸಿದ್ದರಾಮಯ್ಯರ ಪ್ಲಾನ್ ಫ್ಲಾಪ್ ಆಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ಮಂಗಳವಾರ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಹಾಸನದಲ್ಲಿ ಅಹಿಂದ ಸಂಘಟನೆಗಳ ಒಕ್ಕೂಟದಿಂದ ಸ್ವಾಭಿಮಾನಿ ಸಮಾವೇಶದ ಹೆಸರಿನಲ್ಲಿ ಸಿದ್ದರಾಮೋತ್ಸವ ಭಾಗ-2 ಮಾಡಲು ಹೊರಟಿದ್ದ ಸಿದ್ದರಾಮಯ್ಯ ಅವರ ಹಿಡನ್ ಅಜೆಂಡ್ ಅರಿತ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಬಣದ ಪ್ಲಾನ್‍ಗೆ ತಣ್ಣೀರು ಎರಚಿದ್ದಾರೆ ಎಂದು ಟೀಕಿಸಿದ್ದಾರೆ.

ಬೇನಾಮಿ ಪತ್ರದ ಮೂಲಕ ಹೈಕಮಾಂಡ್‍ಗೆ ದೂರು ಕೊಡಿಸಿ ಇಡೀ ನಾಟಕದ ಟೈಟಲ್, ಕಥೆ, ಚಿತ್ರಕಥೆಯನ್ನೇ ಬದಲಿಸಿರುವ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದೊಳಗೆ ಮುಂದಿನ ದಿನಗಳಲ್ಲಿ ನಡೆಯಲಿರುವ ಕುರ್ಚಿ ಕಾಳಗ ಹೇಗಿರಲಿದೆ ಎನ್ನುವ ಕುರಿತು ಹೊಸ ಟ್ರೇಲರ್ ಬಿಟ್ಟಿದ್ದಾರೆ ಎಂದು ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News