ಗ್ರೇಟರ್ ಬೆಂಗಳೂರು ವಿಧೇಯಕ- 2024 | ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿ ರಿಝ್ವಾನ್ ಆರ್ಶದ್ ಆಯ್ಕೆ
ಬೆಂಗಳೂರು : ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ- 2024ರ ಪರಿಶೀಲನೆ ಮತ್ತು ವರದಿಗಾಗಿ ರಚನೆಗೊಂಡ ಕರ್ನಾಟಕ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷನಾಗಿ ಶಿವಾಜಿನಗರದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಿಝ್ವಾನ್ ಆರ್ಶದ್ ಆಯ್ಕೆಯಾಗಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಬಿಡಿಎ ಅಧ್ಯಕ್ಷ ಎನ್.ಎ.ಹಾರಿಸ್, ಶಾಸಕರಾದ ಎಸ್.ಆರ್.ವಿಶ್ವನಾಥ್, ಜಿಟಿ ದೇವೇಗೌಡ ಸೇರಿದಂತೆ ಪ್ರಮುಖರು ನೂತನ ಅಧ್ಯಕ್ಷರನ್ನು ಅಭಿನಂದನೆ ಸಲ್ಲಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ರಿಝ್ವಾನ್ ಆರ್ಶದ್, ಈ ಸಮಿತಿಯು ನಮ್ಮ ಬೆಂಗಳೂರಿನ ಆಡಳಿತ, ಅಭಿವೃದ್ಧಿ ಮತ್ತು ಜನರ ಜೀವನ ಮಟ್ಟ ಸುಧಾರಣೆಗೆ ಸಂಬಂಧಿಸಿದಂತೆ ಜನಕೇಂದ್ರಿತ ವಿಧೇಯಕಕ್ಕೆ ಅಗತ್ಯ ಯೋಜನಾ ಪ್ರಕ್ರಿಯೆಗಳನ್ನು ಮುಂದಿನ ಮೂರು ತಿಂಗಳ ಕಾಲಮಿತಿಯೊಳಗೆ ಮಂಡಿಸಲು ಬದ್ಧವಾಗಿದೆ ಎಂದು ಹೇಳಿದರು.
ಬೆಂಗಳೂರಿನ ಉಜ್ವಲ ನಾಳೆಯೆಡೆಗಿನ ಈ ಕಾರ್ಯಕ್ಕಾಗಿ ಎಂದಿನಂತೆ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇನೆ. ಕಮಿಟಿಯ ಅಧ್ಯನನ್ನಾಗಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಸಮಿತಿಯ ಎಲ್ಲ ಸದಸ್ಯರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದೂ ಅವರು ಉಲ್ಲೇಖಿಸಿದರು.