ಮನುಕುಲದಲ್ಲಿ ಜಾತಿ ರಹಿತ ಸಮ ಸಮಾಜದ ಮೌಲ್ಯ ಬಿತ್ತಿದ ಬಸವ ತತ್ವ ಶಾಶ್ವತ : ಸಿಎಂ ಸಿದ್ದರಾಮಯ್ಯ

Update: 2024-06-20 18:37 GMT

ಬಳ್ಳಾರಿ : ವರ್ಗರಹಿತ, ಜಾತಿ ರಹಿತ ಸಮ ಸಮಾಜದ ಮೌಲ್ಯವನ್ನು ಮನುಕುಲದಲ್ಲಿ ಬಿತ್ತಿದ ಬಸವ ತತ್ವವೇ ಶಾಶ್ವತವಾದದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಶ್ವಾಸಯೋಗ ಸಂಸ್ಥೆ ಮತ್ತು ಸಂತೋಷ್ ಲಾಡ್ ಫೌಂಡೇಷನ್ ಆಯೋಜಿಸಿದ್ದ "ಯೋಗ ರತ್ನ-2024" ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಘೋಷಣೆ ಮಾಡುವುದಕ್ಕೆ ಮೊದಲೇ ನಾನು ರಾಜ್ಯದಲ್ಲಿ ಯೋಗದಿನವನ್ನು ಆಚರಿಸುವ ಮೂಲಕ ಯೋಗ ವಿಜ್ಞಾನವನ್ನು ಜನರಲ್ಲಿ ವಿಸ್ತರಿಸುವ ಕಾರ್ಯಕ್ಕೆ ಮುಂದಾದೆ ಎಂದರು.

ಸಮಾಜದ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ದುಡಿಯುತ್ತಿರುವ ಸ್ವಾಮೀಜಿಗಳು ಒಟ್ಟಾಗಿ ತಮ್ನನ್ನು ಮತ್ತು ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಒಪ್ಪಿ ಆಶೀರ್ವದಿಸಿದಕ್ಕಾಗಿ ಸ್ವಾಮೀಜಿಗಳ ಸಮೂಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧನ್ಯವಾದ ಅರ್ಪಿಸಿದರು.

ವಚನಾನಂದ ಸ್ವಾಮಿಗಳು, ಇಳಕಲ್ ಮಠದ ಶರಣರು ಸೇರಿ 50 ಮಂದಿ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಸಂತೋಷ್ ಲಾಡ್, ಸಂಸದ ಈ.ತುಕಾರಾಂ, ಮಾಜಿ ಸಚಿವ ಮುರುಗೇಶ್ ನಿರಾಣಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News