ಬಳ್ಳಾರಿ| ಸ್ಟೀಲ್ ಕಂಪೆನಿಯಲ್ಲಿ ದುರಂತ: ಮೂವರು ಉದ್ಯೋಗಿಗಳು ಮೃತ್ಯು

Update: 2024-05-10 15:51 GMT

ಸಾಂದರ್ಭಿಕ ಚಿತ್ರ (PTI)

ಬಳ್ಳಾರಿ: ಇಲ್ಲಿನ ತೋರಣಗಲ್‍ನಲ್ಲಿರುವ ಜೆಎಸ್‍ಡಬ್ಲ್ಯೂ ಸ್ಟೀಲ್ ಕಂಪೆನಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಉಂಟಾದ ಸಮಸ್ಯೆಯಿಂದಾಗಿ ಗುರುವಾರ ದುರಂತ ಸಂಭವಿಸಿ ಮೂವರು ಉದ್ಯೋಗಿಗಳು ನೀರಿನ ಸುರಂಗದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಕಂಪೆನಿಯ ಸಿವಿಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಹೊಸಪೇಟೆಯ ಗಂಟೆ ಜಡೆಪ್ಪ(31), ಚೆನ್ನೈ ಮೂಲದ ಶಿವಮಗದೇವ್(22) ಹಾಗೂ ಬೆಂಗಳೂರಿನ ಸುಶಾಂತ್ ಕೃಷ್ಣ ನೈನಾರು (23) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ವಿದ್ಯುತ್ ಪೂರೈಕೆಯಲ್ಲಿ ಉಂಟಾದ ಸಮಸ್ಯೆಯಿಂದಾಗಿ ಜೆಎಸ್‍ಡಬ್ಲ್ಯು ಸ್ಟೀಲ್‍ನ ಎಚ್‍ಎಸ್‍ಎಮ್-3 ಘಟಕದ ಸುರಂಗದಲ್ಲಿ ನೀರಿನ ಹರಿವು ಸ್ಥಗಿತಗೊಂಡಿತ್ತು. ಈ ವೇಳೆ ಸುರಂಗದ ಪರಿಶೀಲನೆ ನಡೆಸಲು ಮೂವರೂ ಸಿಬ್ಬಂದಿ ಅದರ ಒಳಗೆ ಪ್ರವೇಶಿಸಿದ್ದರು.

ಸಿಬ್ಬಂದಿ ಒಳಗಿರುವಾಗಲೇ ಸುರಂಗದಲ್ಲಿ ನೀರು ಏಕಾಏಕಿ ಪ್ರವಾಹವಾಗಿದೆ. ಆಗ ಮೂವರೂ ಕೊಚ್ಚಿಕೊಂಡು ಹೋಗಿ 70-80 ಅಡಿ ಆಳದ ಬೇರೆ ಬೇರೆ ಟ್ಯಾಂಕ್‍ಗಳಲ್ಲಿ ಬಿದು ಮೃತಪಟ್ಟಿದ್ದಾರೆ.

ಮೇ 9ರ ಗುರುವಾರ ರಾತ್ರಿ ಹೊತ್ತಿಗೆ ಎರಡು ಶವಗಳು ಸಿಕ್ಕಿದ್ದು, ಇನ್ನೊಬ್ಬರ ಮೃತದೇಹ ಶುಕ್ರವಾರ ಬೆಳಗ್ಗೆ ಲಭ್ಯವಾಗಿದೆ. ಕಬ್ಬಿಣದ ಬಿಸಿ ಸರಳುಗಳನ್ನು ತಣಿಸಲು ಈ ಸುರಂಗಗಳ ಮೂಲಕ ನಿರಂತರವಾಗಿ ನೀರು ಹರಿಸಲಾಗುತ್ತದೆ. ಹೀಗೆ ಹರಿಸಿದ ನೀರು ವಿವಿಧ ಟ್ಯಾಂಕ್‍ಗಳಲ್ಲಿ ಸಂಗ್ರಹವಾಗುತ್ತದೆ. ಈ ಸುರಂಗಳಲ್ಲಿನ ಸಮಸ್ಯೆ ಸರಿಪಡಿಸಲು ಈ ಮೂವರು ಸಿಬ್ಬಂದಿ ತೆರಳಿದ್ದರು ಎಂದು ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News