ಮೊಳಕೇರಾ ಗ್ರಾಮದ ಅಂಗಡಿ, ಹೋಟೆಲ್‌ಗಳಲ್ಲಿ ಮದ್ಯಪಾನ ಮಾರಾಟ ನಿಷೇಧಿಸಲು ಮನವಿ

ಬೀದರ್ : ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದಲ್ಲಿನ ಕಿರಾಣಿ ಅಂಗಡಿ ಮತ್ತು ಹೊಟೆಲ್ ಗಳಲ್ಲಿ ಅತಿಹೆಚ್ಚು ಮದ್ಯಪಾನ ಮಾರಾಟವಾಗುತ್ತಿದ್ದು, ನಿಷೇಧಿಸುವಂತೆ ಮನವಿ ಮಾಡಲಾಗಿದೆ.
ಇಂದು ಹುಮನಾಬಾದನ ಅಬಕಾರಿ ನಿರೀಕ್ಷಕರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಮೊಳಕೇರಾ ಗ್ರಾಮದಲ್ಲಿ ಕಿರಾಣಿ ಅಂಗಡಿ ಮತ್ತು ಹೋಟೆಲ್ ಗಳಲ್ಲಿ ಅತೀ ಹೆಚ್ಚಾಗಿ ಮದ್ಯಪಾನ ಮಾರಾಟ ಮಾಡುತ್ರೆತಿದ್ದು, ಇದರಿಂದಾಗಿ 15 ವರ್ಷ ಮೇಲ್ಪಟ್ಟ ಯುವಕರು ಹಗಲು, ರಾತ್ರಿ ಎನ್ನದೇ ಮದ್ಯಪಾನ ಸೇವಿಸುತ್ತಿದ್ದಾರೆ. ಧಾರ್ಮಿಕ ಸ್ಥಳಗಳಲ್ಲಿ ಕುಳಿತು ಮದ್ಯಪಾನ ಮಾಡಿ ಅಲ್ಲಿನ ವಾತಾವರಣ ಸಂಪೂರ್ಣವಾಗಿ ಹಾಳು ಮಾಡುತ್ತಿದ್ದಾರೆ. ಈ ಗ್ರಾಮದಲ್ಲಿ ಮದ್ಯಪಾನ ಮಾರಾಟ ನಿಷೇಧ ಮಾಡಬೇಕು ಎಂದು ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ವಿದ್ಯಾರ್ಥಿ ವೇದಿಕೆಯ ರಾಜ್ಯಾಧ್ಯಕ್ಷ ಮನೋಜ್ ಸಿತಾಳೆ, ವಿಧ್ಯಾರ್ಥಿ ಘಟಕದ ತಾಲ್ಲೂಕು ಅಧ್ಯಕ್ಷ ಅರವಿಂದ್ ಜೋಗಿರೆ, ಭೀಮ್ ಆರ್ಮಿ ಸಂಘಟನೆಯ ಅನಿಲ್ ದೊಡ್ಡಿ, ಸಾಮಾಜಿಕ ಕಾರ್ಯಕರ್ತರಾದ ಭೀಮರೆಡ್ಡಿ ಸಿಂಧನಕೇರಾ ಹಾಗೂ ಯುವರಾಜ್ ಎಸ್. ಐಹೊಳ್ಳಿ ಸೇರಿದಂತೆ ಇತರರು ಇದ್ದರು.