ಬೀದರ್ | ಪತ್ರಿಕೆಗಳ ಸಂಪಾದಕರಿಗೆ ನಿವೇಶನ ನೀಡುವಂತೆ ಸಚಿವರುಗಳಿಗೆ ಮನವಿ

Update: 2024-12-01 12:50 GMT

ಬೀದರ್ : ನಗರದಲ್ಲಿರುವ ಪತ್ರಿಕೆಗಳ ಸಂಪಾದಕರಿಗೆ ನಿವೇಶನಕ್ಕಾಗಿ ಜಮೀನು ನೀಡಬೇಕು. ಇದಕ್ಕಾಗಿ ಜಮೀನು ಪತ್ತೆಹಚ್ಚಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಬೀದರ್ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಜಿಲ್ಲಾ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.

ನಗರದ ಪತ್ರಿಕಾ ಭವನದಲ್ಲಿ ರವಿವಾರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರಿಗೆ ಸಂಘದ ಜಿಲ್ಲಾ ಅಧ್ಯಕ್ಷ ವಿಜಯ್ ಕುಮಾರ್ ಪಾಟೀಲ್ ಅವರು ಮನವಿ ಪತ್ರ ಸಲ್ಲಿಸಿದರು.

ಮನವಿಗೆ ಸ್ಪಂದಿಸಿ ಬೀದರ್ನ ಸೂಕ್ತ ಸ್ಥಳದಲ್ಲಿ ನಿವೇಶನ ಪತ್ತೆ ಹಚ್ಚಿ ನಿವೇಶನಗಳನ್ನು ದೊರಕಿಸಿಕೊಡಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಪೌರಾಡಳಿತ ಸಚಿವರಾದ ಮತ್ತು ಶಾಸಕ ರಹೀಂ ಖಾನ್ ಅವರು ಸಹ ಮನವಿ ಪತ್ರ ಸ್ವೀಕರಿಸಿ ಬೀದರ್ನ ನೌಬಾದ್ ಅಥವಾ ಇನ್ನಿತರ ಕಡೆ ಸ್ಥಳ ನಿಗದಿ ಮಾಡಿ ನಿವೇಶನ ಕೊಡುವುದಾಗಿ ಭರವಸೆ ನೀಡಿದರು.

ನಿಯೋಗದಲ್ಲಿ ವಚನ ಕ್ರಾಂತಿ ಸಂಪಾದಕರಾದ ಬಾಬು ವಾಲಿ ಮತ್ತು ಆಶೋಕ ಕೋಟೆ ಪ್ರಾದೇಶಿಕ ಕನ್ನಡ ದಿನಪತ್ರಿಕೆ ಸಂಪಾದಕರಾದ ಅಶೋಕ್ ಕುಮಾರ್ ಕಾರಂಜಿ, ಜಿಲ್ಲಾ ಘಟಕದ ಪದಾಧಿಕಾರಿಗಳಾದ ಆನಂದ್ ದೇವಪ್ಪ, ಸ್ವಾಮೀದಾಸ್, ಶ್ರೀನಿವಾಸ್ ಚೌಧರಿ, ಜಾರ್ಜ್ ಫರ್ನಾಂಡೀಸ್, ಪೃಥ್ವಿರಾಜ್ ಎಸ್ , ಪ್ರದೀಪ್ ಬಿರಾದರ್, ಅಮರೇಶ್ ಚಿದ್ರಿ, ಸುನಿಲ್ ಕುಮಾರ್ ಹೊನ್ನಾಳಿ, ಸುನಿಲ್ ಕುಮಾರ್ ಕುಲಕರ್ಣಿ ಮತ್ತು ಅಬ್ದುಲ್ ಖಧೀರ್, ಬಸವರಾಜ ಪವರ್, ಮುಂತಾದವರು ಹಾಜರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News