ಬೀದರ್ | ಯುವಕನ ಕೊಲೆ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

Update: 2024-12-02 12:03 GMT

ಬೀದರ್ : ಯುವಕನೊಬ್ಬನ ತಲೆಗೆ ಬಲವಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಎಸ್‌ಪಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ನ.29 ರಂದು ನಗರದ ಹಳೆ ಆದರ್ಶ ಕಾಲೋನಿಯ ನಿವಾಸಿ ಅಂಬರೀಶ್ (28) ಎಂಬ ಯುವಕನನ್ನು ಗಣೇಶ ಮೈದಾನದ ಹತ್ತಿರ ಉಳ್ಳಾಗಡ್ಡೆ ವೈನ್ ಶಾಪ್ ನಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.

ನಗರ ಪೊಲೀಸರು ಕೊಲೆ ಆರೋಪಿಗಳ ಶೋಧ ಕಾರ್ಯ ನಡೆಸಿ, ರಾಜಕುಮಾರ (30), ಅನಿಲ್ (28) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.

ಅಂಬರೀಶ್ ಮದ್ಯ ಕುಡಿದು ನಮ್ಮ ಜೊತೆ ಯಾವಾಗಲೂ ಜಗಳ ಮಾಡುತಿದ್ದ, ಹಾಗಾಗಿ ಅವನನ್ನು ಕೊಲೆ ಮಾಡಿದ್ದೇವೆ ಎಂದು ಆರೋಪಿಗಳು ಒಪ್ಪಿಕೊಂಡಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News