ಬೀದರ್ | ಯತ್ನಾಳ್ ತನ್ನ ಹೇಳಿಕೆಗೆ ಕ್ಷಮೆಯಾಚಿಸಬೇಕು ವಿಜಯ್ ಸಿಂಗ್ ಆಗ್ರಹ
Update: 2024-12-03 13:55 GMT
ಬೀದರ್ : ಯತ್ನಾಳ್ ಅವರು ಸಾಂಸ್ಕೃತಿಕ ನಾಯಕ ಬಸವಣ್ಣನವರ ನಿಜವಾದ ಚರಿತ್ರೆ ಅರಿಯಬೇಕು. ತಮ್ಮ ಹೇಳಿಕೆ ಕುರಿತು ಅವರು ಕ್ಷಮೆಯಾಚಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯ್ ಸಿಂಗ್ ಒತ್ತಾಯಿಸಿದ್ದಾರೆ.
ವಿಜಯಪುರ ಬಿಜೆಪಿ ಶಾಸಕ ಯತ್ನಾಳ್ ಬಸವಣ್ಣನವರ ಕುರಿತು ಇಲ್ಲ ಸಲ್ಲದ ಹೇಳಿಕೆ ನೀಡಿರುವುದು ಸರಿಯಲ್ಲ. ಬಸವಣ್ಣನವರು ವಚನಗಳ ಮೂಲಕ ವಿಶ್ವಕ್ಕೆ ಬೆಳಕು ತೋರಿದ ದಾರ್ಶನಿಕ. ಕಲ್ಯಾಣ ಕ್ರಾಂತಿಯ ಮೂಲಕ ಸಮಾಜಕ್ಕೆ ಹೊಸ ಮಾರ್ಗ ತೋರಿದ್ದರು. ಅಂತಹ ಮಹಾನ್ ಪುರುಷ ಹೊಳೆಗೆ ಹಾರಿದ್ದರು ಎಂಬ ಹೇಳಿಕೆ ಬಸವಾನುಯಾಯಿಗಳಿಗೆ ನೋವಂಟು ಮಾಡಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.